ಹುಬ್ಬಳ್ಳಿ: ಸಾವಿರಾರು ಮಹಿಳೆಯರ ಮಾನ ಹಾನಿಗೆ ಕಾರಣರಾಗಿರುವ ವಿದೇಶಕ್ಕೆ ಪಲಾಯನ ಗೈದಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕರೆತಂದು ಗಲ್ಲು ಶಿಕ್ಷೆ ವಿಧಿಸಬೇಕೆಂದು ಹು-ಧಾ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಪಡಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಪ್ರಜ್ವಲ್ ವಿರುದ್ಧ ಮಾತನಾಡಿರುವ ವಿಡಿಯೋ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಜ್ವಲ್ ರಾಸಲೀಲೆ ವಿರುದ್ದ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ಸಿಗರು ಬೃಹತ್ ಪ್ರತಿಭಟನೆ ಮಾಡಿದ್ದೇವೆ, ಇದು ಮೋದಿ ಪರಿವಾರಾನಾ? ರೇವಣ್ಣ ಅವರ ಪರಿವಾರ ನಿಮ್ಮ ಪರಿವಾರವಾ.? ಎಂದು ಖಾರವಾಗಿ ಪ್ರಶ್ನಿಸಿದರು.
ಶಾಸಕ ರೇವಣ್ಣ ಮತ್ತವರ ಪುತ್ರ ಪ್ರಜ್ವಲ್ನಿಂದ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಅತ್ಯಾಚಾರ ಮಾಡಿದ್ದಾರೆ, ಇದರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡೂ ಮಿಲಾಪಿಯಾಗಿವೆ, ಇಷ್ಟೆಲ್ಲಾ ಅನಾಚಾರ ನಡೆಸಿ ಪ್ರಜ್ವಲ್ ಜರ್ಮನ್ಗೆ ಪಲಾಯನ ಮಾಡಲು ಎರಡೂ ಪಕ್ಷಗಳು ಕುಮ್ಮಕ್ಕು ನೀಡಿವೆ ಎಂದು ಪ್ರಸಾದ್ ಅಬ್ಬಯ್ಯ ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಲಲಿತ್ ಮೋದಿ, ವಿಜಯ ಮಲ್ಯನಂತಹವರು ಈ ದೇಶದ ಸಂಪತ್ತನ್ನು ಲೂಟಿ ಮಾಡಿಕೊಂಡು ವಿದೇಶಕ್ಕೆ ಹಾರಿದ್ದಾರೆ, ಪ್ರಜ್ವಲ್ ಸಾವಿರಾರು ಮಹಿಳೆಯರ ಮಾನ ದೋಚಿಕೊಂಡು ವಿದೇಶಕ್ಕೆ ಓಡಿಹೋಗಿದ್ದಾರೆ ಎಂದು ಪ್ರಸಾದ್ ಅಬ್ಬಯ್ಯ ಹರಿಹಾಯ್ದರು.