ಶಿಗ್ಗಾವಿ: ವ್ಯಕ್ತಿಯೊಬ್ಬರಿಂದ ಹಣ ಪಡೆಯುತ್ತಿದ್ದ ಶಿಗ್ಗಾವಿ ಪುರಸಭೆ ಕಂದಾಯ ವಿಭಾಗದ (ಎಸ್‌ಡಿಎ) ಸಿಬ್ಬಂದಿ ಸತೀಶ ತಳವಾರ ಗುರುವಾರ ಸಂಜೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಅಬ್ದುಲ್ ರಶೀದ್ ದಿವಾನ್ದಾರ್ ಎಂಬವರಿಗೆ ಹಳೇ ಕೈಬರಹ ಉತಾರ ಕೊಡಲು 10 ಸಾವಿರ ಬೇಡಿಕೆ ಇಟ್ಟಿದ್ದರು. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಪುರಸಭೆ ಆವರಣದಲ್ಲಿ 8 ಸಾವಿರ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1