Top NewsUncategorizedಕಥೆ/ಕವನ
Trending

ಸಮಾಜ ಸೇವೆಯೇ ಜೀವಾಳವಾಗಿಸಿಕೊಂಡ ಸಂತೋಷ್ ಆರ್ ಶೆಟ್ಟಿ

ಮಲೆನಾಡು ತವರು ಶಿವಮೊಗ್ಗ ಮಣ್ಣಿನ ಮಗನಾದರೂ, ವಾಣಿಜ್ಯ ನಗರಿ ಹುಬ್ಬಳ್ಳಿಯೇ ತಮ್ಮ ಕರ್ಮಭೂಮಿಯಾಗಿಸಿಕೊಂಡ ವಿಶ್ವಮಾನ್ಯ ಪ್ರಶಸ್ತಿ ಪಡೆದ ಮೊದಲ ಕಿರಿಯ ಕನ್ನಡಿಗ ಹಾಗೂ ಸಮಾಜ ಸೇವೆಯಲ್ಲಿ ಸಂತೋಷ ಕಾಣುವ ಸಂತೋಷ ಆರ್. ಶೆಟ್ಟಿಯವರಿಗೆ ಇಂದು ಜನ್ಮದಿನದ ಸಂಭ್ರಮ.

ಸಮಾಜ ಸೇವೆಯೇ ತಮ್ಮ ಜೀವಾಳ ಎನ್ನುವ ಸಂತೋಷ ಅವರು ಶಿಕ್ಷಣ ಪಡೆಯಲು ಪರದಾಡುವ ವಿಧ್ಯಾರ್ಥಿಗಳಿಗೆ ಸ್ವತಃ ತಾವೇ ಧನಸಹಾಯ ಮಾಡಿದ್ದಾರೆ, ಅಲ್ಲದೇ ಅನ್ನದಾನ, ರಕ್ತದಾನ,ಕೃತಕ ಕೈ ಕಾಲು ನೀಡುವ. ಅಬ್ಬಾ ಒಂದೇ ಎರಡೇ ಸಾಕಷ್ಟು ಬಡವರಿಗೆ ಜೀವಿಗಳಿಗೆ ಆಶ್ರಯರಾಗಿದ್ದು, ಇವರ ಸಮಾಜ ಸೇವೆಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬರುತ್ತಿರುವುದು ಇವರ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿಶ್ವಮಾನ್ಯ ಪ್ರಶಸ್ತಿ ಪಡೆದ ಕನ್ನಡ ಮೊದಲ ಕಿರಿಯ ಸಾಧಕರೆನಿಸಿದರೇ, ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಬಸವ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಮಾಜ ಸೇವೆಯಲ್ಲಿ ಸಾಧನೆಗೈದವರನ್ನು ಗುರುತಿಸಿ ಕೊಡ ಮಾಡುವ ಕರ್ನಾಟಕ ರತ್ನ, ಡಾ. ಪುನೀತ್ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಪ್ರದಾನ ಮಾಡುವ ರಾಜರತ್ನ ಪ್ರಶಸ್ತಿಗೂ ಸಂತೋಷ ಆಯ್ಕೆಯಾಗಿದ್ದು, ಇವರ ಸಮಾಜಮುಖಿ ವ್ಯಕ್ತಿತ್ವವನ್ನು ಸಾರುವಂತಿದೆ.

ನಾಡು ನುಡಿಯ ಹೆಮ್ಮೆಯ ಸೇವಕರಾಗಿ,, ಕಲಾ ಪೋಷಕರಾಗಿ, ಪ್ರಗತಿಪರ ಕೃಷಿಕನಾಗಿ ಸದ್ದಿಲ್ಲದೆ ಸಾಮಾಜ ಸೇವೆಯನ್ನು ನಿರಂತರವಾಗಿ ತಮ್ಮ ಕಾರ್ಯ ಮುಂದುವರೆಸಿಕೊಂಡು ಹೊರಟಿರುವುದು ಎಷ್ಟೋ ಬಡ ಜೀವಿಗಳಿಗೆ ಬೆನ್ನೆಲುಬಾಗಿದ್ದಾರೆ. ಅಪಘಾತದಲ್ಲಿ ಕೈ, ಕಾಲು ಕಳೆದುಕೊಂಡಂತಹ ಸಾವಿರಾರು ಅಂಗವಿಕಲರಿಗೆ ಕೃತಕ ಕಾಲು ಹಾಗೂ ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಂಗವಿಕಲರ ಮೊಗದಲ್ಲಿ ಮಂದಹಾಸ ಮೂಡುವ ಕಾರ್ಯ ಮಡಿದ್ದು ಸ್ಮರಣೀಯ.

ಹುಬ್ಬಳ್ಳಿಯ ಡಾಲರ್ಸ್ ಕಾಲೋನಿಯ ಅಧ್ಯಕ್ಷರಾಗಿರುವ ಇವರು ಹುಬ್ಬಳ್ಳಿಯಲ್ಲಿಯೇ ಮಾದರಿ ಕಾಲೋನಿಯನ್ನಾಗಿ ಮಾಡುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ.  ಅಲ್ಲದೇ ಕೋವಿಡ್ ಹಾಗೂ  ನೆರೆಹಾವಳಿ ಸಂದರ್ಭದಲ್ಲಿ ಮಾಡಿದ ಇವರ ಕಾರ್ಯ ಅನನ್ಯವಾಗಿದೆ. ಪ್ರಸ್ತುತ ವಿವೇಕಾನಂದ ಸ್ಪೋರ್ಟ್ಸ್ ಆ್ಯಂಡ್  ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಜೊತೆ ಕೈ ಜೋಡಿಸಿ ಅನೇಕ ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತಾವು ಸಮಾಜಕ್ಕೆ ಅಮೋಘ ರತ್ನರಾಗಿ ಪ್ರಜ್ವಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿ  ಇನ್ನಷ್ಟು  ಸಾಧನೆಗೈಯಲಿ ಹಾಗೂ  ಆಯೋಷ್ಯಾರೋಗ್ಯ ಭಗವಂತ ಕರುಣಿಸಲಿ ಎಂಬುದೇ ಅವರ ಅಸಂಖ್ಯಾತ ಅಭಿಮಾನಿಗಳ ಧ್ವನಿಯಾಗಿದೆ.

ನಾನು ಇಷ್ಟಪಟ್ಟು ಮಾಡುವಂತಹ ಸಮಾಜ ಸೇವೆಗೆ ಸಾಕಷ್ಟು ಪ್ರಶಸ್ತಿಗಳ ಮಹಾಪೂರವೇ ಹರಿದು ಬರುತ್ತಿದ್ದು, ಇನ್ನಷ್ಟು ಮತ್ತಷ್ಟು ಸಮಾಜ ಮಾಡುವಂತಹ ಜವಾಬ್ಧಾರಿಯನ್ನು ಹೆಚ್ಚಿಸಿದೆ. ಸಮಾಜ ಸೇವೆಯಲ್ಲಿ ನಾನು ಪರಮಾತ್ಮ ಹಾಗೂ ತಂದೆಯವರನ್ನು ಕಾಣುತ್ತಿದ್ದೇನೆ.

-ಸಂತೋಷ ಆರ್ ಶೆಟ್ಟಿ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button