ದೇಶಾದ್ಯಂತ ಸಂಚಲನ ಮೂಡಿಸಿದ್ದ ತುಮಕೂರಿನ ಜೋಡಿ..! 25 ವರ್ಷದ ಯುವತಿ ಕೈಹಿಡಿದಿದ್ದ 45 ವರ್ಷದ ವರ ಸೂಸೈಡ್..!
ತುಮಕೂರು: ದೇಶದಾದ್ಯಂತ ಸಂಚಲನ ಮೂಡಿಸಿದ್ದ ತುಮಕೂರಿನ ಜೋಡಿಯ ಬಾಳಲ್ಲಿ ಬಿರುಗಾಳಿ ಬೀಸಿದ್ದು, ತನಗಿಂತ ವಯಸ್ಸಿನಲ್ಲಿ 20 ವರ್ಷ ಚಿಕ್ಕವಳ ಜೊತೆಗೆ ಮದುವೆಯಾಗಿದ್ದ ರೈತ ಶಂಕರಪ್ಪ ಇಂದು (ಮಾ.29) ಡೆತನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೌದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡಮಕುಪ್ಪೆ ಗ್ರಾಮ ಬಳಿಯ ಅಕ್ಕಿಮರಿಪಾಳ್ಯದ ಶಂಕರಪ್ಪ (45) ಮೃತಪಟ್ಟವನಾಗಿದ್ದು, ಈತ 2021 ರ ಅಕ್ಟೊಬರ್ ನಲ್ಲಿ ಸಂತೆ ಮಾವತ್ತೂರು ಗ್ರಾಮದ ತನಗಿಂತ 20 ವರ್ಷದ ಸಣ್ಣವಯಸ್ಸಿನ ಮೇಘಾನಾ ಜೊತೆಗೆ ಸಪ್ತಪದಿ ತುಳಿದಿದ್ದನು. ಇವರ ಮದುವೆ ಸದ್ದು ತುಮಕೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯ, ರಾಷ್ಟ್ರದಲ್ಲಿ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ಇವರ ಜೀವನಕ್ಕೆ ಶುಭವಾಗಲಿ ಎಂದು ಸಾವಿರಾರು ಜನರು ಹಾರೈಸಿದ್ದರು.
ಆದರೆ ಇಂದು ರೈತ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಘನಾಗೆ ಈ ಹಿಂದೆ ಬೇರೊಬ್ಬನ ಜತೆಲ ಮದುವೆ ಆಗಿತ್ತಂತೆ. ಆದರೆ, ಕಳೆದ 2 ವರ್ಷದಿಂದ ಪತಿ ಕಾಣೆಯಾಗಿದ್ದು, ಪತ್ನಿಯನ್ನು ನೋಡಲೂ ಬಂದಿರಲಿಲ್ಲವಂತೆ. ಇದೇ ಕಾರಣಕ್ಕೆ ಬೇಸತ್ತ ಮೇಘನಾ, 45 ವರ್ಷಗಳ ಮದುವೆ ಆಗದೇ ಹಾಗೇ ಉಳಿದಿದ್ದ ಶಂಕರಣ್ಣ ಅವರ ಬಳಿ ತನ್ನನ್ನು ಮದುವೆ ಆಗ್ತೀರಾ ಎಂದು ಕೇಳಿದ್ದಳು. ಇದಕ್ಕೆ ಒಪ್ಪಿದ್ದ ಶಂಕರಪ್ಪ ಮದುವೆ ಆಗಿದ್ದರು.
25 ವರ್ಷದ ಯುವತಿ 45 ವರ್ಷದ ರೈತರೊಬ್ಬರನ್ನ ಮದುವೆ ಆಗಿದ್ದ ಸುದ್ದಿ ಕೇಳಿ ಬಹುತೇಕರು ಶುಭಕೋರಿ ಹರಸಿದ್ದರು. ಆದರಿಂದು ಬೆಳಗ್ಗೆ ಈ ಜೋಡಿ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ. ಇಂದು ಬೆಳಗ್ಗೆ ಮನೆಯಿಂದ ಹೊಲದ ಕಡೆ ಹೋಗೋದಾಗಿ ಹೇಳಿ ಹೋಗಿದ್ದ ಶಂಕರಪ್ಪ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಹುಲಿಯೂರುದುರ್ಗ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.