ರೌಡಿಶೀಟರ್ ಅಕ್ಬರ್ ಮುಲ್ಲಾ ಕೊಲೆಯಾಗುವ ಹಿಂದಿನ ದಿನ ಏನೇನೂ ಆಗಿತ್ತು ಗೊತ್ತಾ…?
ಕಮಿಷನರ್ ಹೇಳಿಕೆ
ಹುಬ್ಬಳ್ಳಿ: ಅವರೆಲ್ಲ…ಒಂದೇ ತಟ್ಟೆಯಲ್ಲಿ ಊಟಾ ಮಾಡಿ, ಅಣ್ಣ-ತಮ್ಮಂದಿರ ಹಾಗೇ ಇದ್ದವರು. ಆದರೆ, ಅದ್ಯಾವ ಕೆಟ್ಟ ಗಳಿಗೆ ಅವರ ಬಳಿ ಸುಳಿದಿತ್ತೋ ಗೊತ್ತಿಲ್ಲ. ಅಣ್ಣ-ತಮ್ಮಂದಿರ ತರಹ ಇದ್ದವರ ನಡುವೆ ಬಿರುಕು ಮೂಢಿ, ರಕ್ತದೊಕುಳಿ ಆಡಿ ಬಿಟ್ಟಿದ್ದಾರೆ.
ಹೌದು, ಪ್ರೀಯ ಓದುಗರೇ, ಈ ಮೇಲಿನ ವಿಷಯಕ್ಕೆ ಸಂಬಂಧಿಸಿದ ಹಾಗೇ ಮೊನ್ನೆ ಮೊನ್ನೆ ತಾನೇ ಬರ್ಬರವಾಗಿ ತನ್ನ ಸ್ನೇಹಿತರ ಕೈಯಲ್ಲಿ ಹತ್ಯೆಯಾದ ದುರ್ದೈವಿ ಅಕ್ಬರ್ ಮುಲ್ಲಾ. ಸಾಯುವ ದಿನ ಏನೇನೂ ಘಟನೆ ನಡೆದಿತ್ತು. ಈ ಘಟನೆ ಕುರಿತ ಸಂಪೂರ್ಣ ವರದಿಯನ್ನು ನಾವು ನಿಮ್ಮ ಮುಂದೆ ತೆರದಿಡುತ್ತೇವೆ ನೋಡಿ…..
ಕೊಲೆಯಾದ ಅಕ್ಬರ್ ಮುಲ್ಲಾ
ಹೀಗೆ… ಈ ಮೇಲೆ ಫೋಟೋದಲ್ಲಿ ಕಾಣುತ್ತಿರುವ ಈತ ಅಕ್ಬರ್ ಮುಲ್ಲಾ ಅಂತಾ…ಬಹುಶಃ ಸಾಮಾನ್ಯ ಜನರಿಗೆ ಈತನ ಬಗ್ಗೆ ಮಾಹಿತಿ ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಹುಬ್ಬಳ್ಳಿಯ ಕೆಲವು ಪೊಲೀಸ್ ಠಾಣೆಯಲ್ಲಿ ಈತನ ಬಗ್ಗೆ ಎಲ್ಲರಿಗೂ ಗೊತ್ತು. ಕಾರಣ ಈತವೊಬ್ಬ ರೌಡಿಶೀಟರ್. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವನು.
ಅಕ್ಬರ್ ಕೊಲೆ ಬಗ್ಗೆ ಸ್ನೇಹಿತರು ಹೇಳಿದ್ದರು
ಆದರೆ ಅಕ್ಬರ್ ನ ತಾಯಿ ಹುಬ್ಬಳ್ಳಿಯ ಹೊಸೂರಿನವಳು. ಅಕ್ಬರ್ ಜನಿಸಿದ ಕೆಲವೇ ದಿನಗಳಲ್ಲಿ ಆತನ ತಾಯಿ ತೀರಿ ಹೋಗತ್ತಾಳೆ. ಆಗ ಹಸುಗೂಸು ಆಗಿದ್ದ ಅಕ್ಬರ್ ನನ್ನು ಆತನ ತಂದೆ ಮೊರಬಕ್ಕೆ ಕರೆದೊಯ್ದು ಹಾರೈಕೆ ಮಾಡತ್ತಾ ಇರತ್ತಾನೆ. ಹೊಸೂರಿನಲ್ಲಿರುವ ಅಕ್ಬರ್ ನ ಅಜ್ಜಿಗೆ ಮೊಮ್ಮಗನನ್ನು ಬಿಟ್ಟಿರಲು ಮನಸ್ಸು ಆಗಲಿಲ್ಲ. ಈ ಕಾರಣಕ್ಕೆ ಅಕ್ಬರ್ ಅಜ್ಜಿಯ ಮಡಿಲಲ್ಲಿ ಬೆಳೆಯುತ್ತಾನೆ.
ಒಂದೆಡೆ ತಾಯಿಯು ಇಲ್ಲ. ಇನ್ನೊಂದೆಡೆ ತಂದೆಯ ಪ್ರೀತಿಯು ಇಲ್ಲ. ಈ ನಿಟ್ಟಿನಲ್ಲಿ ತನಗೆ ತಾನೇ ಎಂಬಂತೆ ಯೌವ್ವನದ ವಯಸ್ಸು ತಲುಪುತ್ತಾನೆ. ಹೇಳೋರಿಲ್ಲ. ಕೇಳೋರಿಲ್ಲ. ತಾನು ಮಾಡಿದ್ದೆ ಆಟ ಅಂತಾ ಅಕ್ಬರ್ ಬರುಬರುತ್ತಾ ಅಪರಾಧ ಲೋಕದತ್ತ ತನ್ನ ಪಾದಗಳನ್ನು ಇಡಲು ಪ್ರಾರಂಭ ಮಾಡತ್ತಾನೆ. ಕೆಲವೇ ಕೆಲವು ದಿನಗಳಲ್ಲಿ ಹೊಸೂರಿನ ಪ್ರಮುಖ ರೌಡಿಗಳಲ್ಲಿ ಅಕ್ಬರ್ ಮೊದಲಿಗನಾಗುತ್ತಾನೆ. ಇದರ ನಡುವೆ ತನ್ನದು ಒಂದು ಜೀವನ ಇದೆ ಎಂದು ನೆನಪಾಗಿ ತಾನು ಇಷ್ಟಪಟ್ಟ ಯುವತಿಯನ್ನು ಮದುವೆಯಾಗಿ ಒಂದು ಗಂಡು ಮಗುವಿಗೆ ತಂದೆ ಕೂಡಾ ಆಗತ್ತಾನೆ. ಆದರೆ ಅದ್ಯಾಕ್ಕೋ ಆತ ಮಾಡಿದ ಕೆಲವು ತಪ್ಪುಗಳಿಂದ ಆತನ ಪ್ರೀತಿ ಮಗ ಕೂಡಾ ಅನಾರೋಗ್ಯದಿಂದ ಸಾವನ್ನಪ್ಪತ್ತಾನೆ. ಇಲ್ಲಿಂದಲೇ ಅಕ್ಬರ್ ಮಾನಸಿಕವಾಗಿ ಕುಗ್ಗಿ ಹೋಗತ್ತಾನೆ. ಸಾರಾಯಿ ಬಾಟಲಿಗಳತ್ತ ಕಣ್ಣು ಎತ್ತಿ ನೋಡದ ಅಕ್ಬರ್ ಬಾಟಲಿಗಳ ದಾಸನಾಗಿ ಬಿಡತ್ತಾನೆ. ಅಕ್ಬರ್ ನ ಹೆಸರಿನಲ್ಲಿ ಅದೆಷ್ಟೋ ಜನರು ಕೋಟಿ ಕೋಟಿ ದುಡ್ಡು ಮಾಡಿ ಸುಖ ಸಂಪತ್ತಿನಲ್ಲಿದ್ದಾರೆ. ಆದರೆ ಅಕ್ಬರ್ ತನ್ನ ಕುಟುಂಬಕ್ಕೆ ಮಾತ್ರ ಒಂದು ಪುಟ್ಟ ಗೂಡು ಮಾಡಲಾರದೇ ಹೋಗಿ ಬಿಟ್ಟ. ಸದ್ಯ ಅಕ್ಬರ್ ನ ಹೆಂಡತಿ ಹಾಗೂ ಅವನ ಮಗಳಿಗೆ ಈ ಹಿಂದೆ ಅಕ್ಬರ್ ನ ಹೆಸರು ಹೇಳಿ ಕೋಟಿ ಕೋಟಿ ದುಡ್ಡಿ ಮಾಡಿಕೊಂಡವರು ಸಹಾಯ ಮಾಡುತ್ತಾರೋ…ಇಲ್ವೋ..ಅದನ್ನು ದೇವರೇ ಬಲ್ಲ…!
ಕೊಲೆಯಾದ ಹಿಂದಿನ ದಿನ ಏನಾಯ್ತು?
ಅಕ್ಬರ್ ಕೊಲೆಯಾಗುವ ಹಿಂದಿನ ದಿನ ಏನೇನೂ ಆಯ್ತು ಎಂಬ ಸಂಕ್ಷಿಪ್ತ ವಿವರ ಕೊಡುವ ಪ್ರಯತ್ನ “ದಿನವಾಣಿ” ಮಾಡುತ್ತಿದೆ. ಎಂದಿನಂತೆ ಬೆಳಿಗ್ಗೆ ಮನೆಯಲ್ಲಿಯೇ ಇದ್ದ ಅಕ್ಬರ್ ಸ್ನಾನ ಮಾಡಿ ಮನೆಯಿಂದ ತನ್ನ ಅಡ್ಡ ಆದ ಹೊಸೂರಿನತ್ತ ಹೋಗತ್ತಾನೆ. ಇನ್ನೇನು ಹೋಳಿ ಸಮೀಪ ಬರುತ್ತಿದ್ದು ಈ ಕಾರಣಕ್ಕೆ ಪೋಲಿಸರು ಇವರನ್ನು ಹುಬ್ಬಳ್ಳಿಯ ಉಪನಗರ ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ಕೊಡುವ ಜೊತೆಗೆ ಕೆಲವೊಂದಿಷ್ಡು ಹೇಳಿಕೆಗಳನ್ನು ಬರೆಸಿಕೊಂಡು ಹುಬ್ಬಳ್ಳಿಯ ಕಮಿಷನರ್ ಕಚೇರಿ ಗೆ ಹೋಗುವಂತೆ ಸೂಚನೆ ಕೊಡತ್ತಾರೆ. ಜೊತೆಗೆ ಒಬ್ಬ ಪೋಲಿಸ್ ಕೂಡಾ ಹೊಸೂರು ಸರ್ಕಲ್ ವರೆಗೂ ಬೈಕ್ ನಲ್ಲಿ ಅಕ್ಬರ್ ಗೆ ಡ್ರಾಪ್ ಕೊಡತ್ತಾನೆ. ಅಷ್ಟೋತ್ತಿಗೆ ಸಮಯ ಮಧ್ಯಾಹ್ನ ಆಗಿರುತ್ತೆ. ಈ ಕಾರಣಕ್ಕೆ ಹೊಸೂರಿನಿಂದ ತನ್ನ ಅಂಗವಿಕಲ ಸ್ನೇಹಿತನ ಜೊತೆಗೆ ಅಕ್ಬರ್ ನವನಗರದ ಪೋಲಿಸ್ ಕಮಿಷನರ್ ಕಚೇರಿಗೆ ಹೋಗತ್ತಾನೆ. ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕೆಲಸ ಮುಗಿಸಿ ಮರಳಿ ಹೊಸೂರಿನತ್ತ ಬರತ್ತಾನೆ. ಅಲ್ಲಿಯವರೆಗೆ
ಅಕ್ಬರ್ ರಿಗೆ ಯಾವುದೇ ರೀತಿಯ ದಮ್ಮಕಿಯ ಕರೆಗಳಾಗಲಿ ಯಾವುದು ಬಂದಿರಲ್ಲ. ಎಲ್ಲವೂ ನೊರಮಲ್ ಆಗಿರುತ್ತೆ. ನಂತರ ಚನ್ನಪೇಟ ಹತ್ತಿರದ ಖಬರಸ್ತಾನದಲ್ಲಿ ಅಂಗವಿಕಲ ಸ್ನೇಹಿತ ಹಾಗೂ ಇತರ ಸ್ನೇಹಿತರೊಂದಿಗೆ ಎಂದಿನಂತೆ ಹರಟೆ ನಡೆಸುತ್ತಾನೆ ಇದಾಗಲೇ ಸಮಯ ರಾತ್ರಿ 8 ಗಂಟೆ ಹೊಡೆದಿರುತ್ತೆ. ಆಗ ಅಂಗವಿಕಲ ಸ್ನೇಹಿತನಿಗೆ ನೀನು ಮನೆಗೆ ಹೋಗು ಸಮಯ ಆಗಿದೆ ಎಂದು 200 ರೂ ಹಣ ಕೊಟ್ಟು ಕಳಿಸುತ್ತಾನೆ. ಇದಲ್ಲದೇ ಇನ್ನೋರ್ವ ಸ್ನೇಹಿತನಿಗೂ ಎಂದು ನೀನು ಹೋಗು ಎನ್ನದ ಅಕ್ಬರ್ ಆ ದಿನ ನೀನು ಕೂಡಾ ಹೋಗು ಆಮೇಲೆ ಫೋನ್ ಮಾಡುವೆ… ಎಂದು ಮದ್ಯೆ ಸೇವಿಸಲು ಹೋಗತ್ತಾನೆ. ನಂತರ ರಾತ್ರಿ 10:05 ಕ್ಕೂ ಕೂಡಾ ಆತನ ಸ್ನೇಹಿತ ಫೋನ್ ಮಾಡಿದ ಸಾಮಾನ್ಯವಾಗಿ ಮಾತನಾಡಿ ಆಮೇಲೆ ಹೊಸೂರು ಸರ್ಕಲ್ ಬಳಿ ಬರುವುದಾಗಿ ಹೇಳತ್ತಾನೆ….ಇದೆ ಅಕ್ಬರ್ ತನ್ನ ಸ್ನೇಹಿತರೊಂದಿಗೆ ಮಾತನಾಡಿದ ಕೊನೆಯ ಮಾತುಗಳು. ನಂತರ ಆತನ ಬಳಿ ಬಂದವರಾರು? ಕರೆದುಕೊಂಡು ಹೋದವರಾರು? ಮಚ್ಚು ಬೀಸಿದವರಾರು? ಈ ಪ್ರಶ್ನೆಗಳಿಗೆ ಎಲ್ಲ ಉತ್ತರವನ್ನು ಪೋಲಿಸ್ ಇಲಾಖೆ ಇದೀಗ ಕೊಡಬೇಕಿದೆ.