ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಗಬ್ಬೂರ ಬೈಪಾಸ್ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ ರಾಕೇಶ ಮತ್ತು ರಂಜಿತ ಮೃತ ದುರ್ದೈವಿಗಳಾಗಿದ್ದು, ಇವರು ಚಿಕ್ಕಬಳ್ಳಾಪುರದಿಂದ ದಂಡೇಲಿಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ 3:30 ರ ಸುಮಾರಿಗೆ ಗಬ್ಬೂರ ಬೈಪಾಸ್ ಬಳಿ ಆಗಮಿಸಿದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಕಟ್ಟೆಗೆ ಹತ್ತಿದೆ. ಪರಿಣಾಮ ಕಾರು ಪಲ್ಟಿಯಾಗಿದೆ. ಇದರಲ್ಲಿ ರಾಕೇಶ್ ಮತ್ತು ರಂಜಿತ ಸಾವನ್ನಪ್ಪಿದ್ದರೇ, ಇನ್ನುವಳಿದ ನಿತೀನ್, ಅಮಿತ, ಪ್ರಮೋದ್, ಲೋಕೇಶ್ ಎಂಬುವವರಿಗೆ ಗಂಭೀರಗಳಾಗಿದ್ದು, ಇವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ದಕ್ಷಿಣ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1