ಹುಬ್ಬಳ್ಳಿ: ಕಾರು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ತಂದೆ ಮತ್ತು ಮಗಳು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಸಮೀಪ ನಡೆದಿದೆ.
ಗದಗ ಜಿಲ್ಲೆಯ ಮಲ್ಲಸಮುದ್ರದ ಗ್ರಾಮದ ಇಬ್ರಾಹಿಂ ಉವಾಜಿ (35) ಆತನ ಪುತ್ರಿ ಮೂರು ವರ್ಷದ ಇಸ್ಮತ್ ಮೃತ ದುರ್ದೈವಿಗಳು. ಇಂದು ಇಬ್ರಾಹಿಂ ಹಾಗೂ ಆತನ ಪತ್ನಿ ನಶ್ರೀನ್ ಭಾನು ಪುತ್ರಿ ಇಸ್ಮತ್ ಜೊತೆಗೂಡಿ ಒಂದೇ ಬೈಕಿನಲ್ಲಿ ತಮ್ಮೂರಿನಿಂದ ಯಮನೂರು ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಅಣ್ಣಿಗೇರಿ ಸಮೀಪ ಕಾರೋಂದು ವೇಗವಾಗಿ ಬಂದು ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಇಬ್ರಾಹಿಂ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಇಸ್ಮತ್ ಗೆ ಗಂಭೀರವಾದ ಹಾಗೂ ನಶ್ರೀನ್ ಭಾನುಗೆ ಸಣ್ಣಪುಟ್ಟಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಮಗು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಈ ಕುರಿತು ಅಣ್ಣಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.