
ಧಾರವಾಡ: ಧಾರವಾಡದ ಮಹಾನಗರದಲ್ಲಿ ಶಾಲ್ಮಲಾ ನದಿ ಉಗಮಸ್ಥಾನದ ದಡದಲ್ಲಿ ಮಹಾಮಹಿಮ ಯೋಗಿ ಪುಂಗವ, ಪರಮ ತಪಸ್ವಿ ಶ್ರೀ ಸದ್ಗುರು ಅಲ್ಲೀಪುರ ಮಹಾದೇವ ತಾತನಗರ ಮಠದಲ್ಲಿ ಫೆಬ್ರವರಿ 15 ಮತ್ತು 16 ರಂದು 37 ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮ ನಡೆಯಲಿದೆ.
ಫೆ.15 ರಂದು ಬೆಳಿಗ್ಗೆ 10 ರಂದು ಶಾಲ್ಮಲಾ ನದಿ ದಡದಲ್ಲಿ ಶ್ರೀ ತಾತನವರ ವಸಂತೋತ್ಸವ ಮತ್ತು ತೆಪ್ಪೋತ್ಸವ ನಡೆಯಲಿದೆ. ಸಂಜೆ 6 ರಿಂದ ಶ್ರೀಮಠದ ಆವರಣದಲ್ಲಿ ದೀಪಾಲಂಕಾರ ಮತ್ತು ನೃತ್ಯಸೇವೆ, ಪ್ರಾರ್ಥನೆ ನಡೆಯಲಿದೆ.
ಫೆ.16 ರಂದು ಬೆಳಿಗ್ಗೆ 9 ಗಂಟೆಗೆ ವಾದ್ಯ ವೈಭವಗಳಿಂದ ಪಲ್ಲಕ್ಕಿ ಮಹೋತ್ಸವ, 10.30 ಕ್ಕೆ ಪುಣ್ಯಾರಾಧನೆಯ ಕಾರ್ಯಕ್ರಮ, ಸಮಾರೋಪ ಸಮಾರಂಭ, ಸಾಮೂಹಿಕ ವಿವಾಹಗಳ ಅಕ್ಷತಾರೋಪಣ ಮತ್ತು ಮಹಾಪ್ರಸಾದ ನಡೆಯಲಿದೆ
ಉಚಿತ ಸಾಮೂಹಿಕ ವಿವಾಹ
ಶ್ರೀ ಸದ್ಗರು ಅಲ್ಲೀಪುರ ಮಹಾದೇವ ತಾತನವರ ಪುಣ್ಯಾರಾಧನಾ ಕಾರ್ಯಕ್ರಮದ ಅಂಗವಾಗಿ ಉಚಿತ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ವಿವಾಹ ಆಗಬಯಸುವವರು ತಮ್ಮ ಹೆಸರನ್ನು ಫೆಬ್ರವರಿ 10 ರೊಳಗೆ ನೊಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8880678740 ಗೆ ಸಂಪರ್ಕಿಸಬಹುದು.