ಸಾರ್ಥಕ ಸೇವೆಗೆ ಸಂದ ಗೌರವ

ಹುಬ್ಬಳ್ಳಿ: ಇಲ್ಲಿನ ರಾಯಾಪುರದ ರೇಷ್ಮೆ ಇಲಾಖೆಯಲ್ಲಿ ನಿರೀಕ್ಷಕರಾಗಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೃತ್ಯುಂಜಯ ಗದಗಿನ ಅವರನ್ನು ಶುಕ್ರವಾರ ಸಹೋದ್ಯೋಗಿಗಳು ಆತ್ಮೀಯವಾಗಿ ಬಿಳ್ಕೋಟ್ಟರು.

ಇನ್ನು ಮೃತ್ಯುಂಜಯ ಅವರು ತಮ್ಮ ಸೇವೆಯ ಅವಧಿಯಲ್ಲಿ ರೈತರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಲ್ಲದೇ ಇಲಾಖೆಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಇದೀಗ ವಯೋನಿವೃತ್ತಿಯಾದ ಕಾರಣ ಎಂ.ಎಂ.ಗದಗಿನ ದಂಪತಿಗಳನ್ನು ಗೌರವ ಸನ್ಮಾನ ಮಾಡುವರ ಮೂಲಕ ಸತ್ಕರಿಸಿದರು.
ಈ ವೇಳೆ ಮಾತನಾಡಿದ ರೇಷ್ಮೆ ಬೆಳೆಗಾರ ಬಸವರಾಜ್ ಹುಚ್ಚಣ್ಣವರ, ಎಂ.ಎಂ.ಗದಗಿನ ಅವರು ಸೇವೆಯಲ್ಲಿದ್ದಾಗ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ರೈತರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಸರ್ಕಾರದಿಂದ ದೊರೆಯುವ ಸವಲತ್ತುಗಳ ಕುರಿತು ರೈತರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಹೇಳುತ್ತಿದ್ದರು. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ನಂತರ ಉಪ ನಿರ್ದೇಶಕರು ಮಾತನಾಡಿ, ಸೇವಾ ನಿವೃತ್ತಗೊಂಡ ಎಂ.ಎಂ. ಗದಗಿನ ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ವಿಶ್ರಾಂತ ನೌಕರರ ಸಂಘದ ವತಿಯಿಂದ ಗೌರವ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಸ್.ಈ. ಜಾಲಿಕಟ್ಟಿ. ವಿ. ಎನ್. ಅಡಿಗೇರ್. ಎಸ್ ವೈ ಮರಳಿಹಳ್ಳಿ. ಎಸ್ .ಐ. ಕೊಡಲಿ. ಪೀ. ಸೀ ಹಿರೇಮಠ. ಬಿ ಎ. ಗಾಣಿಗೇರ್. ಮತ್ತು ಬಿ .ಎ. ಗಾಣಿಗೇರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.