Uncategorizedಜಿಲ್ಲೆತಂತ್ರಜ್ಞಾನದೇಶ

ಬೇಸಿಗೆ ತಾಪ ತಣಿಸುವ ಸಿಂಫೋನಿ ಏರ್ ಕೂಲರ್ ನ ನೂತನ ಮಾಡೆಲ್ ಗಳ ಬಿಡುಗಡೆ

ಹುಬ್ಬಳ್ಳಿ : ಏರ್ ಕೂಲರ್ ತಯಾರಕ ಸಂಸ್ಥೆಯಾದ ಸಿಂಫೋನಿ ತಾನು ನೂತನವಾಗಿ ಸಿದ್ದಪಡಿಸಿದ ಕೂಲರ್ ಹಾಗೂ ಫ್ಯಾನ್ ಮಾಡೆಲ್ ಅನ್ನು ಬಿಡುಗಡೆ ಮಾಡಿತು.

ಹುಬ್ಬಳ್ಳಿಯ ಗೋಕುಲರಸ್ತೆಯ ಕಾಟನ್ ಕೌಂಟಿ ಕ್ಲಬ್‌ನಲ್ಲಿ ನಡೆಯುತ್ತಿರುವ ಸಿಂಫೋನಿ ಲಿಮಿಟೆಡ್‌ನ ವಿತರಕರ ಸಭೆಯಲ್ಲಿ ಸಿಂಫೋನಿ ಲಿಮಿಟೆಡ್ ಗ್ರೂಪ್ ಸಿಇಓ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮಿತ್ ಕುಮಾರ್ ಅವರು ಡ್ಯುಯಟ್ ಲಿಂಗ್ ಫ್ಯಾನ್ ಸರೌಂಡಿಂಗ್ ಟವರ್ ಫ್ಯಾನ್ ಮಾಡೆಲ್ ಗಳನ್ನು ಪರದೆ ತೆರೆಯುವ ಮೂಲಕ ಅನಾವರಣಗೊಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ಸಂಯೋಜನೆಯೋ ಅಮಿತ್ ಕುಮಾರ್, ಏರ್‌ ಕೂಲರ್‌ಗಳ ಉತ್ಪಾದನೆಯಲ್ಲಿ ಸಿಂಫೋನಿ ಮುಂಚೂಣಿಯಲ್ಲಿದೆ. 60 ಬಗೆಯ ಕೂಲರ್ ಮತ್ತು ಫ್ಯಾನ್‌ಗಳನ್ನು ಹೊಂದಿದೆ. ವಿಶ್ವದ 60ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಮೊದಲ ಎರಡು ಕೋವಿಡ್ ಅಲೆಗಳು ಈ ಸಂದರ್ಭದಲ್ಲಿ ಬಂದ ವ್ಯಾಪಾರಕ್ಕೆ ತೊಂದರೆಯಾಗಿತ್ತು. ಈಗ ಚೇತರಿಸಿಕೊಂಡಿದೆ. ಗ್ರಾಹಕರ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಎರಡು ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಪ್ರಕಟಿಸಿದರು.

ಡ್ಯುಯಟ್‌ ಕೂಲಿಂಗ್‌ ಫ್ಯಾನ್‌ ಅನ್ನು ಕೂಲರ್‌ ಹಾಗೂ ಟವರ್‌ ಫ್ಯಾನ್‌ ಆಗಿ ಬಳಸಲಾಗುವುದಿಲ್ಲ. 180 ಡಿಗ್ರಿಯಲ್ಲಿ ತಿರುಗಲಿದೆ. ಅದರಲ್ಲೂ ರಿಮೋಟ್ ಹಾಗೂ ವಿಥೌಟ್ ರಿಮೋಟ್ ಎರಡು ಬಗೆಯಲ್ಲಿವೆ. ಸರೌಂಡಿಂಗ್‌ ಟವರ್‌ ಫ್ಯಾನ್ ಎಂಬ ಮತ್ತೊಂದು ಉತ್ಪನ್ನವನ್ನು ಬಿಡುಗಡೆ ಮಾಡಲಾಗುತ್ತಿದೆ, 25 ಅಡಿವರೆಗೆ ಗಾಳಿ ಬರುತ್ತದೆ. ಬ್ಲೇಡ್ಲೆಸ್ ಆಗಿದ್ದರೂ ಮಕ್ಕಳಿದ್ದರೂ ಯಾವುದೇ ರೀತಿ ಅಪಾಯಕಾರಿಯಲ್ಲ. ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಸೋಸಿಯೇಟ್ ಉಪಾಧ್ಯಕ್ಷ ಕುಮಾರ ಪಂಕಜ್ ಸ್ಥಾಪಿಸಿದ್ದಾರೆ.

ಹುಬ್ಬಳ್ಳಿ ಟ್ರಿನಿಟಿ ಮಾರ್ಕೆಟಿಂಗ್‌ ಮಾಲೀಕ ವಿಲ್ಸನ್‌ ಮಾತನಾಡಿ, ಸಿಂಫೋನಿಯು ವಿತರಕರನ್ನು ತನ್ನ ಅವಿಭಾಜ್ಯ ಅಂಗವೆಂದು ಭಾವಿಸುತ್ತದೆ.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಾಖೆಯ ಮುಖ್ಯಸ್ಥ ಆರೀಫ್ ಹುಸೇನ್ ಶೇಖ್ ಸೇರಿದಂತೆ ಎಟ್.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button