Uncategorizedಜಿಲ್ಲೆಸಂಸ್ಕೃತಿ
‘ಅಡ್ಡ’ ಹೆಸರಿನ ಹಾಗೇ ‘ನಾಯಕ’ನ ಕೆಲಸ ಮಾಡಿದ “ರವಿ”
ಹುಬ್ಬಳ್ಳಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಸಿದ್ದಾರೋಢ ಸೇವಾ ಬಳಗ ಉಪವಾಸ ವೃತ ಗೈದ ಭಕ್ತರಿಗೆ ಹಣ್ಣು ಹಂಪಲು ನೀಡುವ ಸೇವೆ ಮಾಡಿದರು.
ಇಲ್ಲಿನ ಜಗತ್ಪ್ರಸಿದ್ಧ ಶ್ರೀ ಸಿದ್ದಾರೂಢಮಠದ ಆವರಣದಲ್ಲಿನ ಈಶ್ವರ ಗುಡಿಗೆ ಬಂದಂತಹ ಭಕ್ತರಿಗೆ ಬಿಜೆಪಿ ವಕ್ತಾರ ರವಿ ನಾಯಕ ನೇತೃತ್ವದಲ್ಲಿಂದು ಸುಮಾರು 500 ಕ್ಕೂ ಅಧಿಕ ಜನರಿಗೆ ಬಾಳೆಹಣ್ಣು, ದ್ರಾಕ್ಷಿ, ಕರ್ಜುರ್ ವಿತರಿಸಿದರು.
ಇನ್ನು ಸಿದ್ದಾರೂಢರ ಸೇವಾ ಬಳಗ ಪ್ರತಿವರ್ಷ ಈ ಕಾರ್ಯ ಮಾಡುತ್ತಾ ಬರುತ್ತಿದ್ದು, ಈ ವರ್ಷವೂ ಮುಂದುವರೆಸಿದೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯರಾದ ರಾಮಣ್ಣ ಧಾರವಾಡ, ಮಂಜುನಾಥ ಅಬ್ಬಿಗೇರಿ, ಚನ್ನು ಹೊಂಬಳ, ಈರಣ್ಣ ಎಮ್ಮಿ, ಮೋಹನ್ ಸವಣೂರು, ಆಕಾಶ ಧಾರವಾಡ, ಕಲ್ಪನಾ ನಾಯಕ, ದೃವಿ ನಾಯಕ ಸೇರಿದಂತೆ ಮುಂತಾದವರು ಇದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1