Uncategorized
ರಾಣಾ ಪ್ರತಾಪಸಿಂಹ ಜಯಂತಿ ಆಚರಣೆ
ಹುಬ್ಬಳ್ಳಿ: ರಾಣಾ ಪ್ರತಾಪಸಿಂಹ ಅವರ ಜಯಂತಿಯನ್ನು ರಜಪೂತ ಲೋಹಾರ್ ಗಿನ್ನಿ ಸಮಾಜದ ವತಿಯಿಂದ ಇಲ್ಲಿನ ಮ್ಯಾದಾರ್ ಓಣಿಯಲ್ಲಿ ಆಚರಣೆ ಮಾಡಲಾಯಿತು.
ಜಯಂತಿ ಅಂಗವಾಗಿ ರಾಣಾ ಪ್ರತಾಪ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಮುಖಂಡ ರಾಜು ನಾಯಕವಾಡಿ ಮಾತನಾಡಿ, ಸಮುದಾಯದವರೆಲ್ಲ ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಬಳಿಕ ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅನೂಪ ಬಿಜವಾಡ, ಶಂಕರ ರತನ್ ಚೌಹಾನ್, ವಿನಯ ಚೌಹಾನ್, ಅಶೋಕ ಸಾಳುಂಕೆ, ಮನು ಹೆಬ್ಬಾಳ್ಕರ್, ಶಾನಭಾಜ್ ನವಾಜ್, ಉಜ್ವಲ್ ಚೌಹಾನ್, ಕಿರಣ ಚೌಹಾನ್, ಮಹೇಶ ಬೆಳದಡಿ ಸೇರಿದಂತೆ ಮುಂತಾದವರು ಇದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1