Uncategorizedಜಿಲ್ಲೆಸಂಸ್ಕೃತಿ
ಕೃಷ್ಣ ಜನ್ಮಾಷ್ಟಮಿಯಂದು ಕಳ್ಳ ಕೃಷ್ಣನ ವೇಷದಲ್ಲಿ ರಮೇಶ ಸೋಮಕ್ಕನವರ ಪುತ್ರ ಪ್ರಣವ್…!
ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿ ಎಂದರೆ ಅದೊಂದು ಸಡಗರ. ಮನೆಯಲ್ಲಿ ಮಕ್ಕಳಿದ್ದರಂತೂ ಆ ಸಂಭ್ರಮ ಹೇಳತೀರದು. ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿ, ಸಿಂಗರಿಸಿ ಅದರ ಸೊಬಗು ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಖುಷಿ. ಇದೀಗ ಹುಬ್ಬಳ್ಳಿಯ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ರಮೇಶ ಸೋಮಕ್ಕನವರ ಸಹ ತಮ್ಮ ಮಗ ಪ್ರಣವ್ ನಿಗೆ ಕೃಷ್ಣನ ವೇಷ ತೊಡಿಸಿದ್ದಾರೆ.
ವ್ಯಾಪಾರದಲ್ಲಿ ಬ್ಯುಸಿಯಿದ್ದ ರಮೇಶ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮಗ ಪ್ರಣವ್ ಗೆ ಕೃಷ್ಣನ ವೇಷ ಹಾಕಿದ್ದಾರೆ. ಎರಡು ವರ್ಷದ ಪ್ರಣವ್ ಗೆ ಸರಳವಾದ ಕೃಷ್ಣನ ಅಲಂಕಾರ ಮಾಡಿದ್ದಾರೆ. ಪಂಚೆ, ಕೈಯಲ್ಲಿ ಕೊಳಲು, ಹಣೆಗೆ ನಾಮವಿಟ್ಟು ಆಚರಿಸಿದ್ದಾರೆ.
ಈ ಮೂಲಕ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1