ರಜತ್ ಸಂಭ್ರಮಕ್ಕೆ ಕ್ಷಣಗಣನೆ, ಲೋಕಸಭಾ ಹೊಸ್ತಿಲಲ್ಲಿ ಮತ್ತೊಂದು ಶಕ್ತಿ ಪ್ರದರ್ಶನ..?
ಹುಬ್ಬಳ್ಳಿ : ಕಳೆದ ಎರಡು ವರ್ಷಗಳಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ರಜತ ಸಂಭ್ರಮಕ್ಕೇ ಇದೀಗ ಮತ್ತೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಹುಟ್ಟು ಹಬ್ಬದ ದಿನದಂದು ರಜತ ಪೌಂಡೇಶನ್ ಮೂಲಕ ನಡೆಯುತ್ತಾ ಬಂದಿರುವ ಕಾರ್ಯಕ್ರಮ ಇದಾಗಿದ್ದು. ಪ್ರತಿವರ್ಷ ಭಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಫೆಬ್ರುವರಿ 14ರಂದು ಕೂಡ ರಜತ್ ಸಂಭ್ರಮ ಅದ್ದೂರಿಯಾಗಿ ನಡೆದಿತ್ತು. ಬೆಂಗೇರಿಯ ರಾಷ್ಟ್ರ ದ್ವಜ ತಯಾರಕರಿಗೆ ಗೌರವದೊಂದಿಗೆ ಸನ್ಮಾನಿಸಿ, ನಗೆ ಹಬ್ಬ ಕೂಡ ಆಚರಿಸಲಾಯಿತು. ಆ ಸಮಯದಲ್ಲಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದಂತೆ ಭಾಸವಾಗಿತ್ತು. ಇದು ಜಗದೀಶ್ ಶೆಟ್ಟರ್ ಗೆ ಕೂಡ ಇರಿಸು ಮುರಿಸು ತಂದಿತ್ತು ಎಂದು ಹೇಳಲಾಗುತ್ತಿದೆ.
ಇನ್ನು ಇದೀಗ ಮತ್ತೆ ರಜತ್ ಸಂಭ್ರಮ ಕಾರ್ಯಕ್ರಮ ನಡೆಸಲು ಪೌಂಡೇಶನ್ ನಿರ್ಧರಿಸಿದ್ದು. ಹುಬ್ಬಳ್ಳಿಯ ಗಿರಣಿಚಾಳ ಮೈದಾನದಲ್ಲಿ ಚಿತ್ರ ನಟ ಡಾಲಿ ಧನಂಜಯ, ಜೊತೆಗೆ ಹಾಸ್ಯ ಕಲಾವಿದ ಪ್ರಾಣೇಶ್ ಅವರ ತಂಡ ಆಗಮಿಸಲಿದೆ ಎಂದು ತಿಳಿದು ಬಂದಿದೆ.
ಸದ್ಯ ಧಾರವಾಡ ಜಿಲ್ಲೆಯಾದ್ಯಂತ ವಾಲ್ ಪೋಸ್ಟರ್, ಬ್ಯಾನರ್ ಹಾಗೂ ಸ್ಟಿಕರ್ ಮೂಲಕ ಕ್ರೇಜ್ ಶುರುವಾಗಿದ್ದು ಇದು ಲೋಕಸಭಾ ಚುನಾವಣೆಗೆ ಈ ಶಕ್ತಿ ಪ್ರದರ್ಶನ ಎಂದು ಹೇಳಲಾಗುತ್ತಿದೆ.