ಸಂಸ್ಕೃತಿ

ವೈಕುಂಠ ಏಕಾದಶಿ ವಿಶೇಷ ಆಚರಣೆ – ಇಸ್ಕಾನ್ ಟೆಂಪಲ್ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮಕ್ಕೆ ಡಾ. ವಿಎಸ್‌ವಿ ಪ್ರಸಾದ್ ಚಾಲನೆ

ಹುಬ್ಬಳ್ಳಿ: ವೈಕುಂಠ ಏಕಾದಶಿ ವಿಶೇಷ ಆಚರಣೆ – ಇಸ್ಕಾನ್ ಟೆಂಪಲ್ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮಕ್ಕೆ ಡಾ. ವಿಎಸ್‌ವಿ ಪ್ರಸಾದ್ ಚಾಲನೆ

ಹುಬ್ಬಳ್ಳಿ: ವೈಕುಂಠ ಏಕಾದಶಿಯನ್ನು ಇಡೀ ರಾಜ್ಯಾದ್ಯಂತ ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಹುಬ್ಬಳ್ಳಿ–ಧಾರವಾಡ ಮಧ್ಯದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವೈಕುಂಠ ದ್ವಾರ ಪ್ರವೇಶ ವಿಶೇಷ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಎಸ್‌ವಿ ಪ್ರಸಾದ್ ಅವರು ಪೂಜೆ ಸಲ್ಲಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಬೆಳಿಗ್ಗೆ 4 ಗಂಟೆಯಿಂದ 9 ಗಂಟೆಯವರೆಗೆ ನಡೆದ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮದಲ್ಲಿ ವೈಕುಂಠ ದ್ವಾರದಲ್ಲಿ ವೆಂಕಟಸ್ವಾಮಿ ದಿವ್ಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ವೈಕುಂಠ ಪ್ರವೇಶದ ಅನುಭವ ನೀಡುವ ರೀತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಈ ವಿಶೇಷ ಸಂದರ್ಭದಲ್ಲಿ ಹುಬ್ಬಳ್ಳಿ–ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಚಂದ್ರವತ್ಸವ, ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಎಸ್‌ವಿ ಪ್ರಸಾದ್, ವೆಂಕಟ ರೆಡ್ಡಿ ಕಿರೇಸೂರ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ ಪುನೀತರಾದರು.

ವರದಿ ಶಶಿಕಾಂತ್ ಕೊರವರ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button