
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಐಪಿ ರಸ್ತೆ ಎಂತಲ್ಲೆ ಕರೆಸಿಕೊಳ್ಳುವ ಗೋಕುಲರಸ್ತೆಯಲ್ಲಿ ಇದೀಗ ಪುತ್ ಪಾತ್ ಒತ್ತುವರಿ ಹೆಚ್ಚಾಗಿದ್ದು, ಇದರಿಂದಾಗಿ ಪಾದಚಾರಿಗಳು, ವಾಹನ ಸವಾರರು ದಿನಂಪ್ರತಿ ಸಂಕಷ್ಟ ಅನುಭವಿಸುತ್ತಿದ್ದಾರೆ.
https://www.instagram.com/reel/DPEg3-4Eo9J/?igsh=MWJ3dnpocjZzeXJxcA==
ಮೊದಲೇ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿದ್ದು, ಬೇರೆ ಕಡೆಯಿಂದ ಬಂದವರು ಬೈದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಗೋಕುಲರಸ್ತೆಯಲ್ಲಿ ದಿನಕ್ಕೊಂದು ಮಾಲ್’ಗಳು ತೆರೆಯುತ್ತಿವೆ. ಈ ಮಾಲ್ ಮಾಲೀಕರು ತಾವಾಗಿತು ತಮ್ಮ ವ್ಯಾಪಾರವಾಯಿತು ಎಂಬಷ್ಟೇ ಇರದೇ ಪುಟ್ ಪಾತ್’ನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ಭರ್ಜರಿಯಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.

ಮಾಂಗಳ್ಯ ಮಾಲ್’ದಿಂದ ಫುತ್ ಪಾತ್ ಒತ್ತುವರಿ: ಪ್ರತಿಷ್ಠಿತ ಬಟ್ಟೆ ಅಂಗಡಿಯಾಗಿರುವ ಮಾಂಗಳ್ಯ ಮಾಲ್ ಮಾಲೀಕರು ಪುಟ್ ಪಾತ್ ನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಪುತ್ ಪಾತ್ ನಲ್ಲಿ ಬ್ಯಾರಿಕೇಡ್’ಗಳನ್ನು ಅಳವಡಿಸಿ ಪಾದಚಾರಿಗಳಿಗೆ ಅಡ್ಡಿ ಮಾಡಿದ್ದಾರೆ. ಅನಿವಾರ್ಯವಾಗಿ ಪಾದಚಾರಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡುವಂತಾಗಿದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಇಲ್ಲಿನ ಪಾದಚಾರಿಗಳು ಸ್ವಲ್ಪ ಮೈಮರೆತರೂ ಸಹ ಅಪಘಾತಕ್ಕೆ ಒಳಗಾಗುವ ಸ್ಥಿತಿಯಿದೆ. ಅಲ್ಲದೇ ಇಲ್ಲಿ ವೇಗದಿಂದ ಬರುವ ವಾಹನಗಳ ಪಕ್ಕದಲ್ಲಿಯೇ ಹೆಜ್ಜೆ ಹಾಕಬೇಕಿದೆ. ಬೆನ್ನಟ್ಟಿ ಬಂದಂತೆ ಭಾಸವಾಗುವ ವಾಹನಗಳಿಂದ ತಪ್ಪಿಸಿಕೊಳ್ಳಲು ಅಂಗವಿಕಲರು, ವಯೋವೃದ್ದರು, ವಿದ್ಯಾರ್ಥಿಗಳು ಇಲ್ಲಿ ಪಡುವ ಪಾಡು ಮರುಕ ಹುಟ್ಟಿಸುತ್ತದೆ. ಇಷ್ಟೆಲ್ಲಾ ಆದರೂ ಸಹಿತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ, ಸಂಚಾರಿ ಪೊಲೀಸರಾಗಲಿ ಈ ಬಗ್ಗೆ ಕ್ರಮವಹಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈಗಲಾದರೂ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ಪುತ್ ಪಾತ್ ಒತ್ತುವರಿ ಮಾಡಿರುವ ಮಾಲ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳತ್ತಾರಾ ಕಾದು ನೋಡಬೇಕಿದೆ.




