Top NewsUncategorizedಅಪರಾಧಜಿಲ್ಲೆರಾಜಕೀಯರಾಜ್ಯ
Trending

ಹೊರಟ್ಟಿ ಮೇಲೆ FIR ಹಾಕಿದ್ದ ಇನ್ಸ್ಪೆಕ್ಟರ್ ಸಸ್ಪೆಂಡ್..!

ಧಾರವಾಡ : ಕರ್ತವ್ಯ ಲೋಪದ ಆರೋಪದ ಮೇಲೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಶ್ರೀಧರ ಸತಾರೆ ಅವರಿಗೆ ಅಮಾನತು ಮಾಡಿ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಆದೇಶ ಹೊರಡಿಸಿದೆ.

ಹೌದು, ಈ ಹಿಂದೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಐ ಶ್ರೀಧರ (ಸರ್ಕಾರಿ ಶಿಕ್ಷಣ ಸಂಸ್ಥೆಯ ವಿಷಯವಾಗಿ ನಡೆದ ಗಲಾಟೆಗೆ ಸಭಾಪತಿ ಬಸವರಾಜ ಹೊರಟ್ಟಿಯವರ ಮೇಲೆ ಪ್ರಕರಣ ದಾಖಲಾಗಿದೆ) ಪ್ರಕರಣ ಸಂಖ್ಯೆ 17/2022 ರಲ್ಲಿ ನಡೆದ ದೂರಿಗೆ ಕಾರಣವಾದ ಘಟನೆಯನ್ನು ತಡೆಯಲು ವಿಫಲವಾಗಿದೆ. ಆರೋಪಿ ಸಂಖ್ಯೆ 5 ಎಂದು ನಮೂದಿಸಿ ತಮ್ಮ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿ ಕರ್ತವ್ಯ ಲೋಪವೆಸಗಿದ್ದಾರೆ. ಕಾರಣದಿಂದ ಆತನ ಇಲಾಖಾ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಿ ದಾಖಲಾತಿಗಳ ಉಲ್ಲೇಖಿತ ಪತ್ರವನ್ನು ಸಲ್ಲಿಸಲಾಗಿದೆ, ಅದನ್ನು ಪರಿಶೀಲಿಸಿದ ಇನ್ಸ್ ಪೆಕ್ಟರ್ ಶ್ರೀಧರ ಸತಾರೆ ಅವರು ಈ ಕೂಡಲೇ ಜಾರಿಗೆ ಬರುವಂತೆ ಇಲಾಖಾ ವಿಚಾರಣೆಯನ್ನು ಬಾಕಿ ಉಳಿಸಿ ಆದೇಶ ಹೊರಡಿಸಿದ್ದಾರೆ.

ಇನ್ನು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ ಸತಾರೆ ಅವರಿಗೆ ಪ್ರಸ್ತುತ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶವಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button