Top NewsUncategorizedಅಪರಾಧಜಿಲ್ಲೆವಿಡಿಯೋ
Trending
ಚೆನ್ನಮ್ಮ ಸರ್ಕಲ್ ನಲ್ಲಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಚೇಸ್ ಮಾಡಿ ಹಿಡಿದ ಪೋಲಿಸ್…!
ಹುಬ್ಬಳ್ಳಿ: ಕುಡಿದು ಮಲಗಿದ್ದ ವ್ಯಕ್ತಿಯ ಮೊಬೈಲ್ ಕಳತನ ಮಾಡಿ ಪರಾರಿಯಾಗಲು ಯತ್ನಿಸಿದ ಮೊಬೈಲ್ ಕಳ್ಳನನ್ನು ಉಪನಗರ ಠಾಣೆಯ ಪೋಲಿಸರೊಬ್ಬರು ಚೇಸ್ ಮಾಡಿ ಹಿಡಿದ ಘಟನೆ ಈಗಷ್ಟೇ ನಡೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಏರಿಬೇಲೇರಿ ಗ್ರಾಮದ ಹುಲ್ಲೇಶ್ ಕಳತನ ಮಾಡಿದ ಆರೋಪಿಯಾಗಿದ್ದು, ಈತ ಇಂದು ಸಂಜೆ ಚೆನ್ನಮ್ಮ ವೃತ್ತದ ಬಳಿಯ ಇದ್ಗಾ ಮೈದಾನ ಬಳಿಯ ಫುಟ್ ಬಾತ್ ಮೇಲೆ ಕಂಠಪೂರ್ತಿಯಾಗಿ ಮದ್ಯ ಸೇವಿಸಿ ಮಲಗಿದ್ದ ಅಪರಿಚಿತ ವ್ಯಕ್ತಿಯ ಕಿಸೆಯಿಂದ ಮೊಬೈಲ್ ಕಳತನ ಮಾಡಿ ಪರಾರಿಯಾಗಲು ಮುಂದಾಗಿದ್ದನು. ಈ ವೇಳೆ ಕೂಗಳತೆ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನಗರ ಠಾಣೆಯ ಸಿಬ್ಬಂದಿ ಮಾಲತೇಶ ಕಳತನವನ್ನು ಗಮನಿಸಿ ಕಳ್ಳನನ್ನು ಬೆನ್ನಟ್ಟಿ ನಿಲಿಜನ್ ರಸ್ತೆಯಲ್ಲಿ ಹಿಡಿದು ಠಾಣೆಗೆ ತಂದು ಒಪ್ಪಿಸಿದ್ದಾರೆ. ಇನ್ನೂ ಪೋಲಿಸ ಸಿಬ್ಬಂದಿ ಮಾಲತೇಶ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1