ಹುಬ್ಬಳ್ಳಿ: ನಗರದಲ್ಲಿ ಮತ್ತೆ ಓಸಿ, ಮಟ್ಕಾ ಜೂಜಾಟ ಎಲ್ಲೆಂದರಲ್ಲಿ ಆರಂಭವಾಗಿದ್ದು, ಹೀಗೆ ಓಸಿ ಬರೆದುಕೊಳ್ಳುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಬೆಂಡಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಮಂಟೂರ ರಸ್ತೆಯ ಬಳ್ಳಾರಿ ಪೆಟ್ರೋಲ್ ಪಂಪ್ ಬಳಿ ಹತ್ತಿರ ಅಪರಿಚಿತ ವ್ಯಕ್ತಿ ತನ್ನ ಸ್ವಂತ ಲಾಭಕೋಸ್ಕರ ಒಂದು ರೂಪಾಯಿಗೆ 90 ರೂಪಾಯಿ ಕೊಡುವ ಆಮಿಷ ತೋರಿಸಿ ಓಸಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಆರ್.ಎಸ್.ಹರಕಿ, ಹೆಚ್.ಎಮ್.ಕರಗಾಂವಿ ದಾಳಿ ಕಲಂ 78(3) ಕೆಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ರೀತಿ ಹುಬ್ಬಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಸಹ ಓಸಿ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಬಗ್ಗೆ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1