Top Newsಅಪರಾಧಜಿಲ್ಲೆ
Trending

ಪೋಲಿಸ್ ಹೆಡ್ ಕಾನ್ಸಟೇಬಲ್ ಗೆ ಇಟ್ಟಿಗೆಯಿಂದ ಮೇಲೆ ಹಲ್ಲೇ : ಸಿಸಿಟಿವಿ ಭಯಾನಕ ದೃಶ್ಯ ಸೆರೆ..!

 

 

👆ಹೊಡೆದಾಟದ ಸಂಪೂರ್ಣ ದೃಶ್ಯಾವಳಿಗಳನ್ನು ಕ್ಲಿಕ್ ಮಾಡಿ ನೋಡಿ…

ಹುಬ್ಬಳ್ಳಿ: ಹೆಡ್ ಕಾನ್ಸಟೇಬಲ್ ಪ್ರಭು ಪುರಾಣಿಕಮಠ ಹಾಗೂ ಭರತ್ ಜೈನ್ ಪರಸ್ಪರ ಹೊಡೆದಾಡಿಕೊಂಡಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಸಿಸಿ ಟಿವಿ ಪುಟೇಜ್ ದೊರೆತಿದ್ದು, ಅದರಲ್ಲಿ ಪ್ರಮುಖ ಅಂಶಗಳು ಬೆಳಕಿದೆ ಬಂದಿದೆ.

ಹೌದು, ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಹೆಡ್ ಕಾನ್ಸಟೇಬಲ್ ಪ್ರಭು ಪುರಾಣಿಕಮಠ ಹಾಗೂ ಭರತ್ ಜೈನ್ ಎಂಬುವವರು ನೀರಿನ ವಿಚಾರಕ್ಕೆ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು ದೊರೆತಿವೆ.

ಈ ದೃಶ್ಯಾವಳಿಗಳಲ್ಲಿ ಹೆಡ್ ಕಾನ್ಸಟೇಬಲ್ ಪ್ರಭು ಪುರಾಣಿಕಮಠ ಭರತ್ ಜೈನ್ ನಿಮ್ಮ ಮನೆಯ ನೀರು ನಮ್ಮ ಮನೆಯ ಕಾಂಪೌಂಡ್ ಒಳಗೆ ಬೀಳುತ್ತಿದೆ. ಅದನ್ನು ನಿಲ್ಲಿಸಿ ಎಂದು ಹೇಳಲು ಹೋಗಿದ್ದರಂತೆ. ಆಗ ಪರಸ್ಪರ ಮಾತಿಗೆ ಬೆಳೆದು ಜಗಳ ಆಗಿದೆ. ಆಗ ಹೆಡ್ ಕಾನ್ಸಟೇಬಲ್ ಪುರಾಣಿಕಮಠ ತಮ್ಮ ಮನೆಯ ಕಾಂಪೌಂಡ್ ಜಿಗಿದು ಭರತ್ ಜೈನ್ ಗೆ ಎರಡು ಹೊಡೆದಿದ್ದಾರೆ. ನಂತರ ಇದರಿಂದ ಕುಪಿತಗೊಂಡ ಭರತ್ ಕೂಡಾ ಪುರಾಣಿಕಮಠ ಅವರ ಮೇಲೆ ಕಲ್ಲು ತೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಪುರಾಣಿಕಮಠ ಅವರು ಕಬ್ಬಿಣದ ರಾಡ್ ತಂದು ಭರತ್ ಜೈನ್ ಅವರನ್ನು ನಡುರಸ್ತೆಯಲ್ಲಿ ಕೆಡವಿ ಮನಬಂದಂತೆ ಹಲ್ಲೇ ಮಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಪೋಲಿಸ್ ಆಯುಕ್ತರು ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ಪ್ರಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರ ಕುರಿತು ಕಾನೂನು ಕ್ರಮ ಜರಗಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ದಿನವಾಣಿಗೆ ತಿಳಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button