
ಹುಬ್ಬಳ್ಳಿ: ಕಳೆದ 15 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಹುಬ್ಬಳ್ಳಿಯ ಇಂದುಮುಂಜಾನೆ ಮತ್ತು ಸಂಜೆ ಮಾಧ್ಯಮ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಶ್ರೀ ಗುರುರಾಜ ಹೂಗಾರ ಅವರಿಗೆ ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿ ಘೋಷಣೆ ಮಾಡಿದೆ.

ಜನವರಿ 18 ಮತ್ತು 19 ರಂದು ನಡೆಯಲಿರುವ 39 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕ್ರಿಯಾಶೀಲ ಪತ್ರಕರ್ತರಾಗಿರುವ ಗುರುರಾಜ ಹೂಗಾರ ಅವರು, ಪಾದರಸ ಗುಣದ ಯುವನಾಯಕರಾಗಿದ್ದಾರೆ.
ಇಂದು ಮುಂಜಾನೆ, ಸಂಜೆ ಮಾಧ್ಯಮ ಎಂಬ ದಿನಪತ್ರಿಕೆಗಳ ಜೊತೆ UNIVERSAL DIGITAL MEDIA ಮುನ್ನಡೆಸುತ್ತಿದ್ದಾರೆ.

ತಾನಾಯ್ತು ತನ್ನ ಕೆಲಸವಾಯ್ತು ಅಂತಲೇ ಹುಬ್ಬಳ್ಳಿಯಿಂದ ರಾಜಧಾನಿಯ ತನಕ ತಮ್ಮ ಕಾರ್ಯದಿಂದಲೇ ಗುರುರಾಜ ಹೂಗಾರ ಅವರು ಸದ್ದು ಮಾಡಿದ್ದಾರೆ.
ಅಕ್ಷರಗಳೊಂದಿಗೆ ತನ್ನದೇ ಬದುಕು ಕಟ್ಟಿಕೊಂಡಿರುವ ಇವರು ಹತ್ತಾರು ಯುವಕರ ಜೀವನಕ್ಕೆ ಸ್ಪೂರ್ತಿ ಮತ್ತು ದಾರಿದೀಪ. ಇದೀಗ ಇವರ ಕಾರ್ಯವನ್ನು ಗುರುತಿಸಿ ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಗೆ ಭಾಜನವಾಗಿರುವ ಸಂಪಾದಕರಾದ ಗುರುರಾಜ ಹೂಗಾರ ಅವರಿಗೆ ಅಭಿನಂದನೆಗಳು.




