ಅಪರಾಧಜಿಲ್ಲೆರಾಜಕೀಯರಾಜ್ಯ

ಮತದಾನ ಮಾಡಿ ರೀಲ್ಸ್ ಮಾಡಿದ ವ್ಯಕ್ತಿ : ಪ್ರಕರಣ ದಾಖಲು

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಈ ನಡುವೆ ಕೆಲವರು ಮತದಾನ ಮಾಡಿ, ಅದನ್ನು ಗೌಪ್ಯವಾಗಿಟ್ಟುಕೊಳ್ಳದೇ, ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಮತದಾನ ಪ್ರಕ್ರಿಯೆಯ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದು ಚುನಾವಾಣಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಚುನಾವಣೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಮತದಾನ ಮಾಡುವಾಗ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಇದೀಗ ಹುಬ್ಬಳ್ಳಿಯ ವ್ಯಕ್ತಿ ವಿರುದ್ಧ ಚುನಾವಣೆ ಅಧಿಕಾರಿಗಳು ಘಂಟಿಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಗರದ ತನ್ವಿರ್ ಅಹ್ಮದ್ ಮನಿಯಾರ್ (33) ಎಂಬ ಮತದಾರ ಈ ಕೃತ್ಯ ಎಸಗಿದ್ದು, ಈತ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಿ.ಬಿ.ರಸ್ತೆಯ ಗಾರ್ಡನಪೇಟ್’ನ ಎಚ್’ಡಿಎಂಸಿ ಸಮೂದಾಯ ಭವನದ ಮತಗಟ್ಟೆ ಸಂಖ್ಯೆ 112 ರಲ್ಲಿ ಮತದಾನ ಮಾಡಿದ್ದಾನೆ. ಈ ವೇಳೆ ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂಬುದನ್ನು ವಿಡಿಯೊ ಚಿತ್ರೀಕರಿಸಿ ಅದನ್ನು ಆತ ಅದನ್ನು ರೀಲ್ಸ್ ಮಾಡಿ ತನ್ನ ಫೇಸ್‌ಬುಕ್‌ ಖಾತೆಯ ಸ್ಟೇಟಸ್ ಅಲ್ಲಿ ಪೋಸ್ಟ್ ಮಾಡಿದ್ದಾನೆ.

ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಚುನಾವಣಾಧಿಕಾರಿಗಳು ತನ್ವೀರ್ ವಿರುದ್ಧ ದೂರು ನೀಡಿದ್ದಾರೆ. ಅಷ್ಟಾಗಿ ಅಲ್ಲದೇ ಮತಗಟ್ಟೆ ಒಳಗಡೆ ಮೊಬೈಲ್ ತೆಗೆದುಕೊಳ್ಳಬೇಕು ಹೋಗಲು ಬಿಟ್ಟ ಸಿಬ್ಬಂದಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇನ್ನು ಇದೇ ರೀತಿಯಲ್ಲಿ ಇತರ ಕಡೆಗಳಲ್ಲಿಯೂ ಗೌಪ್ಯ ಮತದಾನದ ನಿಯಮ ಉಲ್ಲಂಘನೆ ನಡೆದಿದ್ದು, ಅಂತವರ ವಿರುದ್ಧ ಅಧಿಕಾರಿಗಳು ಏನೂ ಕ್ರಮವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮತದಾನ ಗೌಪ್ಯತೆ ಕಾಪಾಡದವರಿಗೆ ಶಿಕ್ಷೆ

ಮತದಾನ ಮಾಡಿದ ಮತದಾರನು ತನ್ನ ಮತದ ಗೌಪ್ಯತೆ ಕಾಪಾಡಿಕೊಳ್ಳಬೇಕು. ಅದನ್ನು ಹೇಳುವ, ಸಾಂಕೇತಿಕವಾಗಿ ತೋರಿಸುವ ಅಥವಾ ಮೊಬೈಲ್’ನಲ್ಲಿ ಚಿತ್ರೀಕರಿಸುವ, ಸ್ಟೇಟಸ್ ಇಡುವ ಕಾನೂನು ಬಾಹಿರ ಕೃತ್ಯ ಮಾಡಬಾರದು, ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಗೌಪ್ಯ ಮತದಾನವನ್ನು ಬಹಿರಂಗ ಮಾಡಿರುವ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ತನಿಖೆ ನಡೆಸಿ ಚುನಾವಣೆ ಆಯೋಗದ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣೆ ಅಧಿಕಾರಿ ದಿವ್ಯಪ್ರಭು ಸ್ಪಷ್ಟಪಡಿಸಿದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
1
+1
0
+1
0
+1
1
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button