ಹುಬ್ಬಳ್ಳಿ: ನಗರದ ಬಿವಿಬಿ ಆವರಣದಲ್ಲಿ ಹತ್ಯೆಯಾದ ನೇಹಾ ಹಿರೇಮಠ ಪೋಷಕರು ಇಂದು ಮತದಾನ ಮಾಡಿದರು. ಇಲ್ಲಿನ ಬಿಡನಾಳದ ಕನ್ನಡಶಾಲೆಯಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಪಾಲಿಕೆ ಸದಸ್ಯರು ಆದ ನಿರಂಜನಯ್ಯ ಹಿರೇಮಠ ಹಾಗೂ ಗೀತಾ ಹಿರೇಮಠ ದಂಪತಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ, ಮನೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಯಾವ ರೀತಿಯಾಗಿ ಭಾಗಿಯಾಗಿ ಸಂಭ್ರಮಿಸುತ್ತೇವೆಯೋ ಹಾಗೇ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿಯಾಗಿ ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಣೆ ಮಾಡಬೇಕು.
ಇದು ನಮ್ಮ ದೇಶದ ಒಳಿತಿಗಾಗಿ, ಸದೃಢ ಭಾರತಕ್ಕಾಗಿ ಮತ ಚಲಾವಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಯುವ ಮತದಾರರಿಗೆ ಹಿರೇಮಠ ದಂಪತಿಗಳು ಕಿವಿ ಮಾತು ಹೇಳಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1