Top NewsUncategorizedಅಪರಾಧಜಿಲ್ಲೆರಾಜ್ಯ

ಐದು ವರ್ಷದ ಪ್ರೀತಿಗೆ ವಿಲನ್ ಆದ ಖಾದಿ ಮತ್ತು ಖಾಕಿ…!

ಆನಂದ & ಐಶ್ವರ್ಯ ಮದುವೆಯ ಕಂಪ್ಲೀಟ್ ಕಹಾನಿ ವಿಡಿಯೋ ಸಮೇತ

ಧಾರವಾಡ: ಪೋಷಕರ ವಿರೋಧದ ನಡುವೆ ರಾಯಾಪೂರದ ಯುವಕನೊರ್ವ ಕುಂದಗೋಳ ತಾಲೂಕಿನ ಯುವತಿಯೊಂದಿಗೆ ಮದುವೆಯಾಗಿದ್ದು, ಇದೀಗ ಯುವತಿಯ ಮನೆಯವರು ನವ ಮಧು-ವರನಿಗೆ ವಿಲನ್ ಆಗಿದ್ದಾರೆ.

ಹೌದು, ಧಾರವಾಡ ತಾಲೂಕಿನ ರಾಯಾಪೂರ ಗ್ರಾಮದ ಆನಂದ ತಿಪ್ಪಣ್ಣನವರ ಹಾಗೂ ಕುಂದಗೋಳ ಪಟ್ಟಣದ ಐಶ್ವರ್ಯ ಎಂಬುವವರೇ ಪೋಷಕರ ವಿರೋಧ ಎದುರಿಸುತ್ತಿದ್ದು, ಇವರು ಹಾಸನದ ಸಣ್ಣ ಹುಲ್ಲಿಕಮ್ಮನ ಗುಡಿಯಲ್ಲಿ ಮಾ.14 ರಂದು ಓಡಿಹೋಗಿ ಮದುವೆಯಾಗಿದ್ದರು. ಇತ್ತ ಯುವತಿಯ ಕುಟುಂಬಸ್ಥರು ತಮ್ಮ ಮಗಳು ಕಾಣೆಯಾಗಿದ್ದು ಹುಡುಕಿಕೊಡಿ ಎಂದು ಕುಂದಗೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಯುವಕನ ಕುಟುಂಬದವರು ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ತಮ್ಮ ಮಗ ಮಾ.13 ರಂದು ಹೊರಗಡೆ ಊಟ ಮಾಡಿ ಬರುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಂದಿಲ್ಲ. ಮಗನನ್ನು ಹುಡುಕಿಕೊಡಿ ಎಂದು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ಯುವತಿಯ ಪೋಷಕರು ರಾಜಕೀಯ ಪ್ರಭಾವ ಹೊಂದಿದ್ದಾರೆಂದು ತಿಳಿದುಬಂದಿದೆ. ಇದರ ಉಪಯೋಗ ಪಡೆದು ಪೋಲಿಸರಿಂದ ಯುವಕನ ಕುಟುಂಬಸ್ಥರ ಮೇಲೆ ದರ್ಪ ತೋರಿ ಆನಂದನ ತಂದೆ, ಮಾವನನ್ನು ಠಾಣೆಗೆ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಮರಳಿ ಬಿಟ್ಟಿಲ್ಲ ಎಂದು ಯುವಕನ ಅಕ್ಕ ಹಾಗೂ ಅಜ್ಜ ಪತ್ರಿಕಾಗೋಷ್ಠಿ ಏರ್ಪಡಿಸಿ ಆರೋಪಿಸಿದರು.

ಇಷ್ಟೆಲ್ಲಾ ಬೆಳವಣಿಗೆ ಮೇಲೆ ಇಂದು ವಧು-ವರ ಮರಳಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ವೇಳೆ ಯುವತಿಯ ಕಡೆಯವರು ಇವರ ಸುಳಿವು ಹಿಡಿದು ಪೋಲಿಸರ ಸಹಕಾರದಿಂದ ಚೆಕ್ ಪೊಸ್ಟ್ ನಿರ್ಮಿಸಿ ಕಲಘಟಗಿ ಬಳಿ ಹಿಡಿಯಲು ಮುಂದಾಗಿದ್ದಾರಂತೆ. ಆದರೂ ನವ ವಧು-ವರ ಅಲ್ಲಿಂದ ತಪ್ಪಿಸಿಕೊಂಡಿದ್ದಾರಂತೆ. ಈ ವೇಳೆ ತಮ್ಮ ಪರಿಚಯಸ್ಥರ ಜೊತೆಗೆ ಫೋನ್ ಕರೆ ಮಾಡಿ ಮಾತನಾಡಿರುವ ವಿಡಿಯೋ ಮತ್ತು ಆಡಿಯೋ ದಿನವಾಣಿಗೆ ಲಭ್ಯವಾಗಿದ್ದು, ಅದರಲ್ಲಿ ನವ ಜೋಡಿ ತಮಗೆ ಜೀವ ಭಯವಿದೆ. ಅಲ್ಲದೇ ರಾಜ್ಯದ ಸಿಎಂ ಸೇರಿದಂತೆ ಕೇಂದ್ರ ಸಚಿವರು ಯುವತಿಯ ಕುಟುಂಬಸ್ಥರ ಬೆಂಬಲಕ್ಕೆ ನಿಂತಿದ್ದಾರೆಂದು ಯುವಕ ಆನಂದ ಮಾತನಾಡಿದ್ದಾನೆ.‌

ಒಟ್ಟಿನಲ್ಲಿ ಪ್ರೀತಿಸಿ ಒಟ್ಟಾಗಿ ಜೀವನ ನಡೆಸಬೇಕು ಎಂದಿದ್ದ ನವಜೋಡಿಗೆ ಇದೀಗ ಖಾಕಿ ಹಾಗೂ ಖಾದಿಯಿಂದ ಸಂಕಷ್ಟ ಎದುರಾಗಿದ್ದು, ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಕಾದುನೋಡಬೇಕಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button