Top NewsUncategorizedಜಿಲ್ಲೆದೇಶರಾಜಕೀಯರಾಜ್ಯ
Trending

ನಮ್ಮ ಗುರಿ ಜೋಶಿಯವರನ್ನು ಸೋಲಿಸುವುದು: ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ದಮನಕಾರಿ ಆಡಳಿತ ನಡೆಯುತ್ತಿದ್ದು, ಪ್ರಲ್ಹಾದ್ ಜೋಶಿ ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದ್ದು, ಇದೀಗ ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಈ ಮುಂದೆ ನಮ್ಮ ಗುರಿ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವುದು ಎಂದು ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ಸಮೂದಾಯ ಸೇರಿದಂತೆ ಇತರ ಸಮೂದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ, ಅವರ ಬದಲಾವಣೆಗೆ ಪಟ್ಟು ಹಿಡಿದು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳು ಚಿಂತನ-ಮಂಥನ ಸಭೆ ನಡೆಸಿ, ಬಿಜೆಪಿ ಹೈಕಮಾಂಡಗೆ ಮಾ.31 ರೊಳಗೆ ಜೋಶಿ ಅವರನ್ನು ಬೇರೆಡೆ ಬದಲಾವಣೆ ಮಾಡಬೇಕು. ಆ ಕ್ಷೇತ್ರಕ್ಕೆ ಲಿಂಗಾಯತ ಸಮೂದಾಯದ ನಾಯಕನನ್ನು ನಿಲ್ಲಿಸಿ ಗೆಲ್ಲಿಸಬೇಕೆಂದು ಪಟ್ಟು ಹಿಡಿದಿದ್ದರು. ಆ ಬೆನ್ನಲ್ಲೇ ಅನೇಕ ಮಠಾಧಿಪತಿಗಳು, ಲಿಂಗಾಯತ ನಾಯಕರು ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಮತ್ತೆ ಕೆಲವರು ದಿಂಗಾಲೇಶ್ವರ ಶ್ರೀಗಳ ಪರವಾಗಿ ಬೆಂಬಲ ಸೂಚಿಸಿದರು. ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಕಲ್ಪನೆ ಆಗಿದೆ. ಅದನ್ನು ಬಗೆಹರಿಸಲಾಗುವುದು, ಈ ಬಗ್ಗೆ ಚರ್ಚಿಸಲು ಅವರು ಸಮಯ ಕೊಡಬೇಕು. ಅವರ ಹೇಳಿಕೆಗಳು ನಮಗೆ ಆರ್ಶೀವಾದ ಎಂದು ಹೇಳಿದ್ದರು. ಹೀಗಾಗಿ ದಿಂಗಾಲೇಶ್ವರ ಶ್ರೀಗಳು ತಮ್ಮ ಹೇಳಿಕೆಯಿ‌ಂದ ಹಿಂದೆ ಸರಿಯಬಹುದು, ಇಲ್ಲ ಅವರೇ ನೇರವಾಗಿ ಸ್ಪರ್ಧೆ ಮಾಡಬಹುದು ಎಂಬ ಚರ್ಚೆಗಳು ನಡೆಸಿದ್ದವು.

ಇದೀಗ ಈ ಎಲ್ಲ ಬೆಳವಣಿಗೆ ನಡುವೆ ಜೋಶಿ ಬದಲಾವಣೆಗೆ ಕೊಟ್ಟ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪ್ರಲ್ಹಾದ್ ಜೋಶಿ ಬದಲಾವಣೆಗೆ ಪಟ್ಟು ಹಿಡಿದ ಬಳಿಕ ಬಹುಸಂಖ್ಯಾತ ನಾಯಕರು ದೂರವಾಣಿ, ಪ್ರತ್ಯೇಕವಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಜಗದಿದ್ದಾಗ ಬೆದರಿಕೆ ಕರೆಗಳು ಬಂದಿವೆ. ನಿಮ್ಮ ಮಾನ, ಪ್ರಾಣ ಹಾನಿ ಮಾಡುವ ಕೆಲಸದ ಬೆದರಿಕೆ ಹಾಕಿದ್ದಾರೆ.

ಆದರೆ ಕೇಂದ್ರ ಸಚಿವರಿಂದ ಅನ್ಯಾಯಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಲು ನಮ್ಮ ಪ್ರಾಣ, ಮಾನ ಹೋದರು ಸರಿ ನಮ್ಮ ನಿಲುವು ಬದಲಾವಣೆ ಆಗದು, ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದಿದ್ದಾರೆ.

ಮುಂದಿನ ನಿರ್ಧಾರವನ್ನು ಚರ್ಚಿಸಲು ಏ. 2 ರಂದು ಧಾರವಾಡದಲ್ಲಿ ಭಕ್ತರ ಸಭೆಯನ್ನು ಕರೆಯಲಾಗಿದೆ. ಅಂದು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ನಮ್ಮ ನಡೆ ನಿಲ್ಲಲಿದೆ ಎಂದು ಹೇಳಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button