ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿಯ ಸಿಸಿಬಿ ಪೋಲಿಸರು ದಾಳಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ಮೂವರು ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇನ್ನೂ ಖಚಿತ ಮಾಹಿತಿ ಮೇರೆಗೆ ಎಸಿಪಿ ಎಸ್.ಟಿ ಒಡೆಯರ್ ಮಾರ್ಗದರ್ಶನ ಹಾಗೂ ಇನ್ಸ್ಪೆಕ್ಟರ್ ಪಿಆರ್ ಗಂಗೇನಹಳ್ಳಿ ನೇತೃತ್ವದಲ್ಲಿ ದಾಳಿ ಮಾಡಿ 232 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಶಮೀರ್ ಕರ್ನಾಸಿ, (19)ಆಯಾನ್ ಖಾನ್,(22)ಎಂಬುವರನ್ನ ಬಂಧನ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗೋಕುಲ ಪೋಲಿಸ್ ಠಾಣೆ ಪಿಎಸ್ ಐ ಬನ್ನಿಗಿಡದ ಹಾಗೂ ಸಿಬ್ಬಂದಿಗಳಾದ ಎಫ್ ಬಿಕುರಿ, ಅನಿಲ ಹುಗ್ಗಿ, ಬೆಳಗಾವಿ, ಧಾರವಾಡ, ಬಜಂತ್ರಿ, ಗುಂಜಾಳ, ಎಸ್ ಐ ಕಡೆಮನಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ಈ ಕುರಿತು ಹುಬ್ಬಳ್ಳಿ ಗೋಕುಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1