ನ. 24 ರಂದು ಪ್ರೋ ಅಲ್ಟಿಮೇಟ್ ಜಿಮ್ ಉದ್ಘಾಟನೆ
ಹುಬ್ಬಳ್ಳಿ: ಇತ್ತಿಚಿನ ದಿನಮಾನಗಳಲ್ಲಿ ಎಲ್ಲರೂ ಆರೋಗ್ಯವಂತ ಜೀವನ ನಡೆಸಲು ಇಷ್ಟಪಡುತ್ತಾರೆ. ಹೀಗಾಗಿ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದರಿಂದ ದೇಹ ಫಿಟ್ ಆಗಿರುತ್ತದೆ. ಅದರಂತೆ ಹುಬ್ಬಳ್ಳಿಯ ಜನರ ಆರೋಗ್ಯದ ದೃಷ್ಟಿಯಿಂದ ಪ್ರೋ ಅಲ್ಟಿಮೇಟ್ ಜೀಮ್ಸ್ ತಮ್ಮ ಹೊಸ ಶಾಖೆಯನ್ನು ಹುಬ್ಬಳ್ಳಿಯ ರಮೇಶ ಭವನದಲ್ಲಿ ಆರಂಭಿದೆ. ಇದರ ಉದ್ಘಾಟನೆ ಸಮಾರಂಭವನ್ನು ನವೆಂಬರ್ 24 ರಂದು ಸಂಜೆ 4.30 ಕ್ಕೆ ಆಯೋಜಿಸಲಾಗಿದೆ ಎಂದು ಪ್ರೋ.ಅಲ್ಟಿಮೇಟ್ ಜಿಮ್ಸ್ ಹುಬ್ಬಳ್ಳಿ ಮಾಲೀಕ ಸತೀಶ್ ಜಾದವ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2012 ರಲ್ಲಿ ಅಭಿಷೇಕ ಗಾಗ್ನೇಜ್ ಎಂಬಾತರು ಸಹಾರನಪುರದಲ್ಲಿ ಕೇವಲ 700 ಚದರ ಅಡಿಯಲ್ಲಿ ಸ್ಥಾಪಿಸಿದ ಪ್ರೋ ಅಲ್ಟಿಮೇಜ್ ಜೀಮ್ ಇದೀಗ ದೇಶದಾದ್ಯಂತ 50 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಅಲ್ಟಿಮೇಟ್ ಜಿಮ್ ಸಲ್ಯೂಶನ್ ಹೆಸರಿನ ಜಿಮ್ ಸಾಧನ ತಯಾರಿಕಾ ಕಂಪನಿಯನ್ನು ನಡೆಸುತ್ತಿದ್ದೆ. ಅದರಂತೆ ಇದೀಗ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ಹುಬ್ಬಳ್ಳಿಯಲ್ಲಿ ತನ್ನ ಮೊದಲ ಶಾಖೆಯನ್ನು ಆರಂಭಿಸಿದೆ ಎಂದರು.
ಇದೀಗ ಹುಬ್ಬಳ್ಳಿಯ ಶಾಖೆಯನ್ನು ಪ್ರೋ ಅಲ್ಟಿಮೇಟ್ ಜಿಮ್ಸ್’ನ ಸಂಸ್ಥಾಪಕ ಅಧ್ಯಕ್ಷರಾದ ಅಭಿಷೇಕ ಗಾಗ್ನೇಜ ಉದ್ಘಾಟನೆ ಮಾಡಲಿದ್ದು, ಅತಿಥಿಗಳಾಗಿ ಹು-ಧಾ ಕರಾಟೆ ಅಸೋಸಿಯೇಷನ್ ಚೇರ್ಮನ್ ಶ್ರೀಕಾಂತ್ ಮಲ್ಲೂರು ಹಾಗೂ ವಿವಿಧ ಸ್ಪೋರ್ಟ್ಸ್’ನಲ್ಲಿ ಸಾಧನೆಗೈದ ಸಾಧಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಪ್ರೋ ಅಲ್ಟಿಮೇಟ್ ಜೀಮ್ ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಉದ್ಘಾಟನೆ ದಿನ ಯಾರು ತರಭೇತಿಗೆ ನೋಂದಣಿ ಮಾಡಿಸುತ್ತಾರೆ. ಅಂತವರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದರು.
ಸೇವೆಗಳು: ಹು-ಧಾ ಅವಳಿನಗರದ ಜನತೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕಾರ್ಡಿಯೋ ವಿಭಾಗದಲ್ಲಿ ಏರ್ ಬೈಕ್ಸ್, ಸ್ಪಿನ್ ಬೈಕ್ಸ್, ಟ್ರೆಡ್ ಮಿಲ್ಸ್, ವಾಟರ್ ರೋಯಿಂಗ್ ಮಷಿನ್ ಮತ್ತು ಎಲಿಪ್ಟಿಕಲ್ ಮಷಿನ್ ಸೌಲಭ್ಯವಿದೆ.
ಅಷ್ಟೇ ಅಲ್ಲದೇ ಜುಂಬಾ, ಭಾಂಗ್ರಾ, ಯೋಗ, ಕ್ರಾಸ್ ಫಿಟ್, ನೃತ್ಯ ಮತ್ತು ಏರೋಬಿಕ್ ತರಭೇತಿ ನೀಡಲಾಗುವುದು.
ಸುಸಜ್ಜಿತ ವ್ಯಾಯಾಮ ಶಾಲೆ: ಪ್ರೋ ಅಲ್ಟಿಮೇಟ್ ಜಿಮ್ಸ್ ಅತ್ಯುತ್ತಮ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು , 5 ಸಾವಿರ ಸ್ವೇರ್ ಫುಟ್ ನಲ್ಲಿ ನವೀನ ತಂತ್ರಜ್ಞಾನದ ಜಿಮ್ ಯಂತ್ರಗಳನ್ನು ಅಳವಡಿಸಲಾಗಿದೆ. ವ್ಯಾಯಾಮದ ಬಳಿಕ ವಿಶ್ರಾಂತಿಗಾಗಿ ಸ್ಟೀಮ್ ರೂಮ್ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ pro ಅಲ್ಟಿಮೇಟ್ ಜೇಮ್ಸ್, ದೂರವಾಣಿ ಸಂಖ್ಯೆ 6362000104 ಗೆ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಅಭಿಷೇಕ ಗಾಗ್ನೇಜ್, ಸೂರ್ಯಾಂಶ ಪಂಡಿತ್, ರೋಹಿತ್ ಉಬಲೆ ಸೇರಿದಂತೆ ಮುಂತಾದವರು ಇದ್ದರು.