ಧಾರವಾಡದ ಸೋನಿಯಾ ಕಾಲೇಜಿನಲ್ಲಿ ನುಡಿ ಸಂಭ್ರಮ ಕಾರ್ಯಕ್ರಮ…

ಧಾರವಾಡ: ಇಲ್ಲಿನ ಸೋನಿಯಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನುಡಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ್ ಜೋಗಿನ್ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕನ್ನಡದ ಭಾಷೆ ಕನ್ನಡದ ಭಾಷಾಜ್ಞಾನವನ್ನು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ಅಲ್ಲದೆ ಬೇರೆ ಭಾಷೆಗಳ ಭಾಷಾಜ್ಞಾನವನ್ನ ಅರಿಯಬೇಕು ಮತ್ತು ಗೌರವದಿಂದ ಕಾಣಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಪ್ರೊ ಲಕ್ಷ್ಮಿ ಕುರಿ, ಉಪಾಧ್ಯಕ್ಷರಾದ ಪ್ರೊ ಲಿಂಗರಾಜ್ ಲಕ್ಷ್ಮೇಶ್ವರ ಮತ್ತು ಉಳಿದ ಉಪನ್ಯಾಸಕ ಸಿಬ್ಬಂದಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳ ಜೊತೆ ಸೇರಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಹೂ ಪುಷ್ಪ ನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸ್ಕೃತಿಕ ಘಟಕದ ಉಸ್ತುವಾರಿ ಅಧ್ಯಕ್ಷರಾದ ಪ್ರೊ ಶ್ರೀಮತಿ ಲಕ್ಷ್ಮಿ ಕುರಿ, ಪ್ರೊ ಲಿಂಗರಾಜ ಲಕ್ಷ್ಮೇಶ್ವರ, ಪ್ರೊ ಗಂಗಾಧರ, ಪ್ರೊಫೆಸರ್ ಸಂತೋಷ, ಪ್ರೊ ರೇಣುಕಾಚಾರ್ಯ, ಪ್ರೊ ಮಲ್ಲಪ್ಪ, ಪ್ರೊ ಆಕಾಶ, ಪ್ರೊ ವಿವೇಕ, ಪ್ರೊ ಯಾಸ್ಮಿನ್, ಪ್ರೊ ವಿನಯ ಕುಲಕರ್ಣಿ, ದೈಹಿಕ ಉಪನ್ಯಾಸಕರಾದ ಸಂಜು ಅಂಗಡಿ ಮತ್ತು ಆಂಗ್ಲ ವಿಷಯದ ಉನ್ಯಾಸಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಕಾರ್ಯಕ್ರಮದ ಬಳಿಕವಿ ದ್ಯಾರ್ಥಿಗಳಿಗೆ ಹಾಡಿನ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿನಿ ನಾಗಮ್ಮ ನಡೆಸಿಕೊಟ್ಟರು. ಮತ್ತು ಕನ್ನಡ ರಾಜ್ಯೋತ್ಸವದ ಕಾಲೇಜಿನ ಕಾರ್ಯಕ್ರಮ ಉಸ್ತುವಾರಿಯನ್ನು ಕಾಲೇಜಿನ ವಿದ್ಯಾರ್ಥಿ ಕಾರ್ಯದರ್ಶಿ ಗಿರೀಶ್ ಮತ್ತು ಎಲ್ಲಾ ವರ್ಗದ ವಿದ್ಯಾರ್ಥಿ ಪ್ರತಿನಿಧಿಗಳು ಉತ್ತಮ ಕಾರ್ಯ ಮಾಡಿದರು . ಕಾರ್ಯಕ್ರಮ ವಂದನಾರ್ಪಣೆಯನ್ನು ಉಪನ್ಯಾಸಕರಾದ ಗಂಗಾಧರ್ ಎಸ್.ಎಂ ನಡೆಸಿಕೊಟ್ಟರು.




