ಶಿಕ್ಷಣದ ಜೊತೆಗೆ ನಾಯಕತ್ವ ಬೆಳೆಸುವಲ್ಲಿ ಎನ್‌ಎಸ್‌ಎಸ್ ಪಾತ್ರ ಅನನ್ಯ

ಧಾರವಾಡ: ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಸೋನಿಯಾ ಪದವಿ ಮಹಾವಿದ್ಯಾಲಯ, ಧಾರವಾಡದ ಎನ್‌ಎಸ್‌ಎಸ್ ಘಟಕದ ವತಿಯಿಂದ 2025–26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಯರಿಕೊಪ್ಪ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶ್ರೀ ಕುಮಾರ್ ಕೆ.ಎಫ್. ಅವರು ಗಿಡಕ್ಕೆ ನೀರು ಹಾಕುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಈ ವೇಳೆ ಸೋನಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಆಡಳಿತ ಮಂಡಳಿ ನಿರ್ದೇಶಕರು, ಕಾಲೇಜಿನ ಪ್ರಾಂಶುಪಾಲರು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು, ಸಿಬ್ಬಂದಿ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಕುಮಾರ್ ಕೆ.ಎಫ್., “ವಿದ್ಯಾರ್ಥಿಗಳ ಜೀವನದಲ್ಲಿ ಕೇವಲ ಪಾಠ್ಯಾಭ್ಯಾಸವಷ್ಟೇ ಅಲ್ಲದೆ ಸಮಾಜಪರಿವರ್ತನೆ ಹಾಗೂ ನಾಯಕತ್ವ ಗುಣಗಳು ಅತ್ಯಗತ್ಯ. ಈ ದಿಕ್ಕಿನಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ, ಸೇವಾಭಾವನೆ ಮತ್ತು ನಾಯಕತ್ವ ಬೆಳೆಸುವ ಅತ್ಯಂತ ಪರಿಣಾಮಕಾರಿ ವೇದಿಕೆಯಾಗಿದೆ. ಮಹಾತ್ಮ ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರ ಪಾತ್ರ ಪ್ರಮುಖವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋನಿಯಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರಕಾಶ್ ಜೋಗಿನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋನಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎಸ್.ವಿ. ಡಂಬಳ್ ಹಾಗೂ ನಿರ್ದೇಶಕಿ ಶ್ರೀಮತಿ ಸೋನಿಯಾ ಎಚ್. ಡಂಬಳ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಉಮೇಶ್ ಗೌಡ, ಚನ್ನಪ್ಪ ಗೌಡ ಪಾಟೀಲ್ (ಮಾಜಿ ಗ್ರಾಮ ಪಂಚಾಯತ್ ಸದಸ್ಯರು) ಸೇರಿದಂತೆ ಊರಿನ ಗಣ್ಯರು, ಹಿರಿಯರು ಹಾಗೂ ಎಲ್ಲಾ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಗಂಗಾಧರ ಎಸ್. ಮರಳಿಹಳ್ಳಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಎಲ್ಲ ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆಯನ್ನು ಸಮೂಹವಾಗಿ ಹಾಡಿದರು.
ಉದ್ಘಾಟಕರಾದ ಆಡಳಿತಾಧಿಕಾರಿ ಕುಮಾರ್ ಕೆ.ಎಫ್. ಅವರಿಗೆ ಸೋನಿಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು ಹಾಗೂ ಗಣ್ಯರ ವತಿಯಿಂದ ಗೌರವ ಸನ್ಮಾನ ಸಲ್ಲಿಸಿ ಹೂಗಿಡ ನೀಡಿ ಪರಿಸರ ಪ್ರಜ್ಞೆ ಮೆರೆದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ. ಲಕ್ಷ್ಮಿ ಕುರಿ, ಪುಷ್ಪಾರ್ಚನೆ ನಿರೂಪಣೆಯನ್ನು ಪ್ರೊ. ಲಿಂಗರಾಜ್ ಲಕ್ಷ್ಮೇಶ್ವರ ಹಾಗೂ ವಂದನಾರ್ಪಣೆಯನ್ನು ಪ್ರೊ. ರೇಣುಕಾಚಾರ್ಯ ಹಿರೇಮಠ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿ, ಎನ್‌ಎಸ್‌ಎಸ್ ನಾಯಕರು ಆದಿಶೇಷ, ಎಲ್ಲಪ್ಪ, ಅಭಿಷೇಕ, ವಿಷ್ಣು, ಆಕಾಶ, ಕಾರ್ತಿಕ್, ಚೈತ್ರ, ನಾಗಮ್ಮ, ಸೌಪರ್ಣಿಕಾ ಸೇರಿದಂತೆ ಅನೇಕ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.




