ಗ್ಯಾಸ್ ಸೋರಿಕೆಯ ಆತಂಕಕ್ಕೆ ನಂದೀಶ್ ಗುಂಡೂರಾವ್ ತ್ವರಿತ ಕ್ರಮ — ಕ್ಷಣಾರ್ಧದಲ್ಲಿ ಅಪಾಯ ನಿವಾರಣೆ!
ಹುಬ್ಬಳ್ಳಿ
ಇಂದು ಮುಂಜಾನೆ ಹುಬ್ಬಳ್ಳಿ ಬೈರೀದೇವರಕೊಪ್ಪ ಶಾಂತಿನಿಕೇತನ ಕಾಲನಿಯಲ್ಲಿ ಗ್ಯಾಸ್ ಸೋರಿಕೆಯ ಘಟನೆ ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಉಂಟುಮಾಡಿತು. ಕಾಲನಿಯ ನಿವಾಸಿಯೊಬ್ಬರು ಮನೆ ಮುಂದೆ ಬೆಳದಿದ್ದ ಮರವನ್ನು ಕಡಿಯಲು ಪಿಡಬ್ಲ್ಯೂಡಿ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಮರವನ್ನು ಕಡಿಯುವ ವೇಳೆ ಅದರ ಒಂದು ದೊಡ್ಡ ತುಂಡು ಮನೆ ಮುಂದೆ ಅಳವಡಿಸಿದ್ದ ಗ್ಯಾಸ್ ಆನ್–ಆಫ್ ಬಾಕ್ಸ್ ಮೇಲೆ ಬಿದ್ದು ತೀವ್ರ ಗ್ಯಾಸ್ ಸೋರಿಕೆ ಉಂಟಾಯಿತು.
ಗ್ಯಾಸ್ ವಾಸನೆ ವ್ಯಾಪಕವಾಗಿ ಹರಡುತ್ತಿದ್ದಂತೆ ನಿವಾಸಿಗಳು ಆತಂಕದಿಂದ ಮನೆಯಿಂದ ಹೊರಗೆ ಬಂದು ನಿಂತರು. ಈ ವೇಳೆ ಸ್ಥಳದಲ್ಲೇ ಇದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಗುಂಡೂರಾವ್ ಅವರ ಪುತ್ರ ನಂದೀಶ್ ಗುಂಡೂರಾವ್ ಅವರು ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ಅಗ್ನಿಶಾಮಕ ದಳ ಮತ್ತು ಗ್ಯಾಸ್ ಕಂಪನಿಯ ಅಧಿಕಾರಿಗಳಿಗೆ ಕರೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅವರ ಸಮಯೋಚಿತ ಹಾಗೂ ಚುರುಕು ನಿರ್ವಹಣೆಯಿಂದ ಕೆಲವೇ ಕ್ಷಣಗಳಲ್ಲಿ ಸೋರಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸದಂತೆ ತಡೆಯಲು ಸಾಧ್ಯವಾಯಿತು.
ಸ್ಥಳೀಯರು ನಂದೀಶ್ ಗುಂಡೂರಾವ್ ಅವರ ವೇಗದ ನಿರ್ಧಾರ ಮತ್ತು ಜನಪರ ಧೋರಣೆಯನ್ನು ಮೆಚ್ಚಿ ಪ್ರಶಂಸಿಸಿದರು.
ಅವರು ಗ್ಯಾಸ್ ಕಂಪನಿಯ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡುತ್ತಾ, “ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷ್ಯ ನಡೆಯಬಾರದು, ಜನರ ಜೀವ ಅಮೂಲ್ಯ,” ಎಂದು ಎಚ್ಚರಿಸಿದರು.
ವರದಿ ಶಶಿಕಾಂತ್ ಕೊರವರ್




