Top NewsUncategorizedಅಪರಾಧಜಿಲ್ಲೆ
ಧಾರವಾಡದಲ್ಲಿ ಮಟನ್ ಗಾಗಿ ಮರ್ಡರ್…?
ಧಾರವಾಡ : ಮಟನ್ ವಿಷಯಕ್ಕೆ ಪ್ರಾರಂಭವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಧಾರವಾಡದಲ್ಲಿ ನಡೆದಿದೆ. ಸಾಧಿಕ್ ಮೋತಿಲಾಲ್ ಬಿಡನಾಳ (40) ಮೃತ ದುರ್ದೈವಿಯಾಗಿದ್ದು, ಮಾ.8 ರಂದು ಸಂಬಂಧಿಕರ ಮದುವೆಯಲ್ಲಿ ಊಟ ಮಾಡುತ್ತಿರುವಾಗ ಒಬ್ಬರಿಗೆ ಮಟನ್ ಹಾಕುವಾಗ ಹೆಚ್ಚಾಗಿ ಹಾಕಿರುವುದನ್ನೇ ಸಾಧಿಕ್ ಪ್ರಶ್ನೆ ಮಾಡಿದಾನಂತೆ ಆಗ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ. ನಂತರ ಹಿರಿಯರ ಸಮ್ಮುಖದಲ್ಲಿ ಕಲಹ ಪರಿಹಾರಕ್ಕೆ ಮುಂದಾದಾಗ ಸಾಧಿಕ್ ಹಿರಿಯರಿಗೂ ಗೌರವ ನೀಡದೇ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಕೋಪಕೊಂಡ ಸಂಬಂಧಿ ರಿಜ್ವಾನ್ ಹಾಗೂ ಸಾಧಿಕ್ ನಡುವೆ ತಳ್ಳಾಟ ನುಕ್ಕಾಟ ನಡೆದಿದೆ. ಆಗ ಸಾಧಿಕ್ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಸಾಧಿಕ್ ತಲೆಗೆ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಕುರಿತು ಧಾರವಾಡ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಿಜ್ವಾನ್ ನನ್ನು ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1