ಧಾರವಾಡ : ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ ಅಂತಾರೆ . ಆದರೆ ಇಲ್ಲೊಂದು ಜಗಳ ಶಾಶ್ವತವಾಗಿ ಒಬ್ಬರನ್ನು ಅಂತ್ಯದಲ್ಲಿ ಮಲಗಿಸುವುದರಲ್ಲಿ ಮುಗಿದಿದೆ.
ಹೌದು, ಗಂಡ ಹೆಂಡತಿಯೊಂದಿಗೆ ಜಗಳ ತೆಗೆಯುವುದು, ಹೊಡೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಹೆಂಡತಿಯೇ ತನ್ನ ಗಂಡನಿಗೆ ಹೊಡೆದು ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈರಪ್ಪ ಅಮರಗೋಳ (48) ಮೃತ ದುರ್ದೈವಿ, ಧಾರವಾಡ ಜಿಲ್ಲೆಯ ಮರೆವಾಡ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಅತಿಯಾದ ಮದ್ಯವೇಸನಿಯಾಗಿದ್ದನು. ಇದರಿಂದ ಆಗಾಗ ತನ್ನ ಹೆಂಡತಿಯೊಂದಿಗೆ ಜಗಳವಾಗುತ್ತಿತ್ತು. ಆದರೆ ಹೀಗೆ ಮಾ.10 ರಂದು ಜಗಳವಾಗಿದ್ದು, ಈ ವೇಳೆ ಪತ್ನಿ ಶೋಭಾ ತನ್ನ ಮಕ್ಕಳೊಂದಿಗೆ ಗಂಡನಿಗೆ ಹೊಡೆದಿದ್ದಾರೆ. ಪರಿಣಾಮ ಈರಪ್ಪನಿಗೆ ಒಳ ಗಂಭೀರಗಾಯಗಳಾಗಿದ್ದವು. ಆತನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಿದ ಕಾರಣ ಈರಪ್ಪನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ, ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟೇ ಪೊಲೀಸ್ ತನಿಖೆಯಿಂದ ಈರಪ್ಪನ ಸಾವಿನ ಸತ್ಯ ಹೊರಬರಬೇಕಿದೆ.