ಹುಬ್ಬಳ್ಳಿ: ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದ್ದ ಕೊಲೆ ಪ್ರಕರಣವನ್ನು ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ಬೆಂಡಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು, ಮಂಟೂರ ರಸ್ತೆಯ ನಿವಾಸಿ ಸ್ಯಾಮ್ಯುಯೆಲ್ ಮಬ್ಬು (38) ಎಂಬಾತನನ್ನು ನಗರದ ಹೊರವಲಯದ ರಿಂಗ್ ರೋಡ್ ಬಳಿಯಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ಇಂದು ಬೆಳಿಗ್ಗೆ ಕೊಲೆ ಮಾಹಿತಿ ಸಿಗುತ್ತಿದ್ದಂತೆಯೇ ಬೆಂಡಿಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಹಿರಿಯ ಅಧಿಕಾರಿಗಳು ಕೂಡಾ ಘಟನಾ ಸ್ಥಳಕ್ಕೆ ದೌಡಾಯಿಸಿ ಶೀಘ್ರ ಕೊಲೆ ಪ್ರಕರಣವನ್ನು ಬೇಧಿಸಲು ಸೂಚನೆ ನೀಡಿದ್ದರು.
ಅದರಂತೆ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ ತಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆಲವೇ ಗಂಟೆಯಲ್ಲಿ ಬಂಧಿಸುವುದಷ್ಟೇ ಅಲ್ಲ ಕೊಲೆಗೆ ಕಾರಣ ಏನೆಂಬುದು ತನಿಖೆಯಿಂದ ಹೊರಗೆ ಎಳೆದಿದ್ದಾರೆ.
ಬಂಧಿತರನ್ನು ಟೈಟನ್ ಬಾಬು, ಸುಲೇಮಾನ್ ಎಂದು ತಿಳಿದುಬಂದಿದೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.
ಈ ಹಿಂದೆ ಮೃತ ಸ್ಯಾಮ್ಯುಯೆಲ್’ನ ಅಕ್ಕ ಮತ್ತು ಅವಳ ಗಂಡನ ನಡುವೆ ಜಗಳ ನಡೆದಿತ್ತು. ಅದಾದನಂತರ ಅಕ್ಕ ತವರು ಮನೆಗೆ ಸೇರಿದ್ದಳು. ಇದಕ್ಕೆ ಅಳಿಯ ಸ್ಯಾಮ್ಯುಯೆಲ್ ಕಾರಣ ಎಂದು ಕೊಪಗೊಂಡಿದ್ದ. ಇದೇ ಕಾರಣಕ್ಕೆ ಮಾವ ಟೈಟಾನ್ ಬಾಬು ಸ್ಯಾಮ್ಯುಯೆಲ್ ಕೊಲೆಗೆ ಎರಡು ಬಾರಿ ಪ್ರಯತ್ನ ಮಾಡಿದ್ದಾನೆ. ಆದರೆ ಸ್ವಲ್ಪದರಲ್ಲಿಯೇ ಸ್ಯಾಮ್ಯುಯೆಲ್ ಪಾರಾಗಿಯಾಗಿ ಜೀವ ಉಳಿಸಿಕೊಂಡಿದ್ದ, ಆದರೆ ಗುರುವಾರ ರಾತ್ರಿ ಮಾತ್ರ ಟೈಟಾನ್ ತನ್ನ ಸ್ನೇಹಿತರೊಂದಿಗೆ ಪಕ್ಕಾ ಪ್ಲಾನ್ ಮಾಡಿ ಸ್ಯಾಮ್ಯುಯೆಲ್’ಗೆ ರಿಂಗ್ ರೋಡ್ ಹತ್ತಿರ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ರಾಡ್’ನಿಂದ ಮನಬಂದಂತೆ ಹೊಡೆದು ಕೊಲೆ ಮಾಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮತ್ತಿಬ್ಬರ ಬಂಧನಕ್ಕೆ ಬಲೆ ಬಿಸಿದ್ದಾರೆ.