ಅಪರಾಧ
ಮುಂಡಗೋಡ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ: ಮನೆ ಕಳ್ಳತನ ಪ್ರಕರಣ ಭೇದಿಸಿ 11 ಅಂತರ ಜಿಲ್ಲಾ ಕಳ್ಳನ ಬೇಟೆ
- ಮುಂಡಗೋಡ. ದಿನಗಳಲ್ಲಿ ಹೆಚ್ಚಾಗುತ್ತಿದ್ದ ಮನೆ ಕಳ್ಳತನ ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದ ಸಂದರ್ಭದಲ್ಲಿ, ಮುಂಡಗೋಡ ಪೊಲೀಸ್ ಠಾಣೆಯವರು ತೋರಿದ ಚುರುಕು, ಬುದ್ಧಿವಂತಿಕೆ ಮತ್ತು ನಿರಂತರ ಶ್ರಮ ಇಂದು ಸಾರ್ವಜನಿಕರ ವಿಶ್ವಾಸವನ್ನು ಮತ್ತೊಮ್ಮೆ ಗಟ್ಟಿಗೊಳಿಸಿದೆ
- ಮುಂಡಗೋಡ ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಕೇವಲ ಕೆಲವೇ ದಿನಗಳಲ್ಲಿ ಭೇದಿಸಿ, ಅಂತರ ಜಿಲ್ಲಾ ಮಟ್ಟದಲ್ಲಿ ಸಂಚರಿಸುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಮುಂಡಗೋಡ ಪೊಲೀಸರು ಸಂಪೂರ್ಣ ಯಶಸ್ಸು ಸಾಧಿಸಿದ್ದಾರೆ.
- ಇದು ಕೇವಲ ಒಂದು ಪ್ರಕರಣದ ಭೇದನೆ ಮಾತ್ರವಲ್ಲ, ಅಪರಾಧಿಗಳಿಗೆ ಮುಂಡಗೋಡ ಪೊಲೀಸರ ಸ್ಪಷ್ಟ ಎಚ್ಚರಿಕೆಯಾಗಿದೆ.
- ಈ ಮಹತ್ವದ ಕಾರ್ಯಾಚರಣೆಯ ಹಿಂದೆ ಇರುವ ಶಕ್ತಿಯೇ ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ಶ್ರೀ ರಂಗನಾಥ್ ನೀಲಮ್ಮನವರು. ಶಾಂತ ಸ್ವಭಾವ, ಗಂಭೀರ ಚಿಂತನೆ ಮತ್ತು ತೀಕ್ಷ್ಣ ತನಿಖಾ ಶೈಲಿಗೆ ಹೆಸರಾಗಿರುವ ಅವರು, ಪ್ರಕರಣದ ಪ್ರತಿಯೊಂದು ಸಣ್ಣ ಸುಳಿವನ್ನೂ ಬಿಡದೇ ಅಧ್ಯಯನ ಮಾಡಿ, ಆರೋಪಿಯ ಚಲನವಲನಗಳನ್ನು ನಿಖರವಾಗಿ ಪತ್ತೆಹಚ್ಚಿದರು.
- ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿ.ಎಸ್.ಪಿ ಶಿರಸಿ ಇವರ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡ ಹಗಲು-ರಾತ್ರಿ ಎನ್ನದೇ ಶ್ರಮಪಟ್ಟು, ಕೊನೆಗೂ 11 ಅಂತರ ಜಿಲ್ಲಾ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಮಂಜುನಾಥ್ ಎಂಬವನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಯಿತು.
- ಆರೋಪಿತನಿಂದ ಸುಮಾರು ₹2.44 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದು ಪೊಲೀಸರ ವೃತ್ತಿಪರ ತನಿಖೆಗೆ ಸ್ಪಷ್ಟ ಸಾಕ್ಷಿಯಾಗಿದೆ.
- ಈ ಕಾರ್ಯಾಚರಣೆಯಲ್ಲಿ ಸಿಪಿಐ ರಂಗನಾಥ್ ನೀಲಮ್ಮನವರೊಂದಿಗೆ ಹೆಗಲಿಗೆ ಹೆಗಲು ಹಾಕಿ ದುಡಿದ ಮುಂಡಗೋಡ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ
- ಹೆಚ್.ಸಿ ಮಂಜುನಾಥ ಚಿಂಚಲಿ, ಸಿಪಿಸಿ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಹಾಗೂ ಕಲ್ಲಪ್ಪ ಹೊನ್ನಿಹಳ್ಳಿ
- ಇವರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ.
- ಕೇವಲ ಕರ್ತವ್ಯ ನಿರ್ವಹಣೆಗಾಗಿ ಅಲ್ಲ, ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂಬ ಮನೋಭಾವದಿಂದ ಕಾರ್ಯನಿರ್ವಹಿಸುವ ಈ ತಂಡ, ಮುಂಡಗೋಡ ಪೊಲೀಸರ ಬಗ್ಗೆ ಜನರಲ್ಲಿ ಗೌರವ ಮತ್ತು ಭರವಸೆ ಹೆಚ್ಚುವಂತೆ ಮಾಡಿದೆ.
- ಮುಂಡಗೋಡ ಪೊಲೀಸರ ಈ ಶ್ಲಾಘನೀಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ
- ವರದಿ ಶಶಿಕಾಂತ್ ಕೊರವರ
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




