ಅಪರಾಧಜಿಲ್ಲೆ

ಮುಂಡಗೋಡ: ಕಬ್ಬು ವಾಹನಗಳ ಹಾವಳಿ, ಅಪಘಾತ, ತಪ್ಪಿದ ಭಾರಿ ಅನಾಹುತ

ಮುಂಡಗೋಡ: ಪಟ್ಟಣದ ಪೋಸ್ಟ್ ಆಫೀಸ್ ಎದುರು ಕಬ್ಬು ತುಂಬಿಕೊಂಡು ಕಾರ್ಖಾನೆ ಹೊರಟ್ಟಿದ್ದ ಟ್ರಾಕ್ಟರ್ ಹಿಂಬದಿ ಟ್ರೈಲರ್ ಕೊಂಡಿ ಕಳಚಿದ ಪರಿಣಾಮ ಮೂರು ಬೈಕುಗಳು ಜಖಂ ಆಗಿ, ರಸ್ತೆಯಲ್ಲಿ ಸಂಪೂರ್ಣ ಕಬ್ಬು ಚಲ್ಲಾಪಿಲ್ಲಿಯಾಗಿ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ.

ತಪ್ಪಿದ ಭಾರಿ ಅನಾಹುತ: ಪಟ್ಟಣದ ಪ್ರ‌ಮುಖ ರಸ್ತೆಗಳಲ್ಲಿ ಒಂದಾದ ಯಲ್ಲಾಪುರ ರಸ್ತೆ ಪ್ರತಿನಿತ್ಯ ಜನಸಂದಣಿ ಇರುವ ರಸ್ತೆ ಆಗಿದೆ. ದಿನವೂ ಪೋಸ್ಟ ಆಪೀಸ್ ಹಾಗೂ ಹಳ್ಳೂರ ಭಾಗಗಳಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆ ಮುಕೇನ ಶಾಲಾ ಕಾಲೇಜು ತೆರಳುತ್ತಾರೆ. ಒಂದು ವೇಳೆ ಯಾರದ್ದೋ ಮೇಲೆ ಅದು ಮುಗುಚಿ ಬಿದ್ದಿದ್ದರೆ ಅದಕ್ಕೆ ಹೊಣೆ ಯಾರು..?

ಕಳೆದ ಮೂರು ನಾಲ್ಕು ತಿಂಗಳುಗಳಿಂದ ತಾಲೂಕಿನಾದ್ಯಾಂತ ಕಬ್ಬು ಕಠಾವು ಆರಂಭಗೊಂಡು, ತಾಲೂಕಿನ ಪ್ರಮುಖ ರಾಜಕೀಯ ದುರೀಣರೊಬ್ಬರ ಕಾರ್ಖಾನೆಯಲ್ಲಿ ಕಬ್ಬನ್ನು ಕ್ರಷಿಂಗ್ ಕಾರ್ಯ ಆರಂಭಗೊಂಡಾಗಿನಿಂದ‌, ಮುಂಡಗೋಡ ಪಟ್ಟಣದಲ್ಲಿ ಪ್ರತಿ ದಿನ ಎಗ್ಗಿಲ್ಲದೆ ಕಬ್ಬನ್ನು ಹೊತ್ತೊಯ್ಯುವ ಟ್ರ್ಯಾಕ್ಟರಗಳ ಅಬ್ಬರಕ್ಕೇನು ಕಡಿಮೆ ಇಲ್ಲ. ಒಂದು ಟ್ರಾಕ್ಟರ್ ಇಂಜೀನಗೆ ಎರಡೆರಡು ಟ್ರೈಲರಗಳನ್ನು ಜಾಯಿಂಟ್ ಮಾಡಿಕೊಂಡು ಅತೀಯಾದ ಓವರ್ ಲೋಡ್ ಹೊತ್ತಿಕೊಂಡು ಹೋಗುವ ಟ್ರಾಕ್ಟರಗಳು ಕಾರ್ಖಾನೆ ತಲುಪವವರೆಗೆ ಪ್ರತಿ ಹಂತದಲ್ಲೂ ಅಪಾಯಕಾರಿ ಚಲನೆಗಳು ಕಂಡುಬರುತ್ತವೆ. ಅತೀಯಾದ ಲೋಡಗೆ ಏರು (ದಿಬ್ಬ) ರಸ್ತೆಯಲ್ಲಿ ಟ್ರ್ಯಾಕ್ಟರ್ ಇಂಜೀನ್ ಮುಂಬಾಗದ ಚಕ್ರಗಳು ರಸ್ತೆಯಿಂದ ಮೇಲಕ್ಕೆದ್ದು ಇಂಜೀನ ಒಲಾಡುವ ಸನ್ನವೇಶಗಳು ಸರ್ವೇ ಸಾಮಾನ್ಯವಾಗಿ ಕಾಣಬಹುದಾಗಿದೆ. ಎಲ್ಲಂದರಲ್ಲಿ ಪಾರ್ಕಿಂಗ್ ಮಾಡಿ ನಿಲ್ಲುವ ಟ್ರ್ಯಾಕ್ಟರ್ ಒಂದು ಕಡೆ ಆದರೆ, ರಾತ್ರಿ ಸಮಯದಲ್ಲಿ ಹಿಂಬದಿಯಲ್ಲಿ ರೇಡಿಯಂ ರಿಪ್ಲೆಕ್ಟರ್ ಇಲ್ಲದೆ ಚಲಿಸುವ ಟ್ರ್ಯಾಕ್ಟರಗಳು ಅಪಘಾತಗಳಿಗೆ ಆಹ್ವಾನ ನೀಡುವದು ಮತ್ತೊಂದು ಕಡೆ.

ಮುಂಡಗೋಡಿನಿಂದ ಶುರುವಾಗುವ ಕಬ್ಬಿನ ಟ್ರ್ಯಾಕ್ಟರ್ ಹಾವಳಿ ಸನವಳ್ಳಿ ದಾಟಿದ ತಕ್ಷಣ ಸಿಂಗಲ್ ಹಾಗೂ ಸಂಪೂರ್ಣ ಹಾಳಾದ ರೋಡನಲ್ಲಿ ಪ್ರತಿ ದಿನ ಕೆಟ್ಟು ನಿಲ್ಲವುದು, ಟ್ರೈಲರ್ ಪಲ್ಟಿ, ಎರೇಡೆರಡು ಇಂಜೀನಗಳಿಂದ ಕಬ್ಬಿನ ಟ್ರೈಲರ್ ಎಳೆಯುವುದು ಪ್ರತಿ ದಿನ ಕಾಣಸಿಗುವ ಸನ್ನವೇಶಗಳು. ಇಲ್ಲಿ ದ್ವಿಚಕ್ರ ವಾಹನ ಪರಿಸ್ಥಿತಿ ಹೇಳತಿರದು. ಟ್ರ್ಯಾಕ್ಟರಗಳು ಪಾರಾಗುವವರೆಗೂ ಎಲ್ಲ ವಾಹನ ಚಾಲಕರು ಅದನ್ನು ನೋಡುತ್ತಲೇ ಇರಬೇಕು. ಮುಂದೆ ಹೋಗಲು ಪ್ರಯತ್ನಿಸದರೆ ಯಾವ ಸಂದರ್ಭದಲ್ಲಿ ಟ್ರೈಲರಗಳು ಮುಗುಚಿ ಬೀಳುತ್ತವೆ ಎಂಬುವುದಕ್ಕೆ ಗ್ಯಾರಂಟಿ ಇಲ್ಲ.

ಒಟ್ಟಾರೆ ಆಗಿ ರಸ್ತೆ ಮೇಲೆ ಜನಸಾಮಾನ್ಯರು ತಮ್ಮ ವಾಹನಗಳನ್ನು ಓಡಿಸಲೆಂದು ಟ್ಯಾಕ್ಸ ಇನ್ಸುರೆನ್ಸ ಎಲ್ಲವನ್ನು ಕಟ್ಟಿ ತಮ್ಮ ತಮ್ಮ ಜೀವಗಳಿಗೆ ರಕ್ಷಣೆ ಇಲ್ಲದೆ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದು ಶೋಚನೀಯ ಸಂಗತಿ ಎಂದು ಜನಸಾಮಾನ್ಯರು ಕಿಡಿ ಕಾರುರಿತಿದ್ದಾರೆ.

ಇನ್ನಾದರೂ ಟ್ರಾಪಿಕ್ ಪೋಲಿಸರು, ( RTO) ಅಧಿಕಾರಿಗಳು ಎಚ್ಚೆತ್ತು ಓವರ್ ಲೋಡ್ ಟ್ರಾಕ್ಟರಗಳಿಗೆ ಕಡಿವಾಣ ಹಾಕುತ್ತಾರಾ.? ಜನರ ಗೋಳಿಗೆ ಇನ್ನಾದರೂ ಸ್ಪಂದಿಸುತ್ತಾರಾ..? ಎಂದು ಕಾದುನೋಡಬೇಕಿದೆ.!!

ವರದಿ : ವೆಂಕಟೇಶ ದಾಸರ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
3
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button