ಅಪರಾಧಜಿಲ್ಲೆ

ಮುಂಡಗೋಡ- ಗುಂಡಿಗೆ ಬಿದ್ದ ಕಾರು, ಸ್ಥಳದಲ್ಲಿಯೇ ಗೋಪಾಲ್ ಸಾವು

ಮುಂಡಗೋಡ: ತಡಸ- ಮುಂಡಗೋಡ ರಸ್ತೆಯ ತಾಯವ್ವನ ಗುಡಿ ಹತ್ತಿರ ಮಾರುತಿ ಸುಜುಕಿ ಬ್ರೆಜಾ ಕಾರು ಗುಂಡಿಗೆ ಬಿದ್ದು, ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶಾನುಭಾಗ ಆಗಿ ಸೇವೆ ಸಲ್ಲಿಸುತ್ತಿದ್ದ ಗೋಪಾಲ ಸಾವೀಗಿಡಾಗಿದ್ದು, ಇನ್ನೀಬ್ಬರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಶನಿವಾರ ಸಂಜೆ 7 ಗಂಟೆ ಸಮಯಕ್ಕೆ ತಡಸ್ ಬಳಿ ಇದ್ದೇವೆ ಮುಂಡಗೋಡಕ್ಕೆ ಬರುತ್ತಿದ್ದೇವೆ‌ ಎಂದು ತಮ್ಮ ಮನೆಯವರ ಜೊತೆ ಮಾತನಾಡಿ, ರಾತ್ರಿ 10 ಗಂಟೆಯಾದರು ಮುಂಡಗೋಡಕ್ಕೆ ಬಂದಿರಲಿಲ್ಲ. ಅವರ ಮೊಬೈಲಗೆ ಕರೆ ಮಾಡಲು ಪ್ರಯತ್ನಿಸಿದಾಗ ಸ್ವಿಚ್ಚ ಆಪ್ ಆಗಿರುವದನ್ನು ಗಮನಿಸಿದ ಕುಟುಂಬಸ್ಥರು ಮತ್ತು ಆತ್ಮೀಯರು ಆತಂಕಗೊಂಡಿದ್ದರು. ತದನಂತರ ಅವರನ್ನು ಹುಡಕಲು ಆರಂಬಿಸಿದ್ದಾರೆ.

ಸುಮಾರು ಎರಡು ಮೂರು ಗಂಟೆಗಳ ಕಾಲ ಹುಡುಕಿದರೆ ಸಿಗದೆ ಇದ್ದಾಗ ಭಯದ ವಾತಾವರಣ ಸೃಷ್ಟಿಯಾಗಿತ್ತು. ತಡರಾತ್ರಿ ಮುಂಡಗೋಡ ತಡಸ್ ರಸ್ತೆ ತಾಯವ್ವನ ಗುಡಿ ಹತ್ತಿರ ಮಾರುತಿ ಸುಜುಕಿ ಬ್ರೆಜಾ ಕಾರು ಗುಂಡಿಗೆ ಬಿದ್ದಿರುವದು ದೃಡವಾಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು, ಇನ್ನೀಬ್ಬರು ಗೋವಿಂದ ಹಾಗೂ ಮಂಜುನಾಥ ಎಂಬುಬರನ್ನ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ತಡಸ ಪೋಲಿಸ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ವೆಂಕಟೇಶ ದಾಸರ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
1
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button