ಕುಂದಗೋಳ: ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ತನ್ನದೇ ಆದ ಸ್ಥಾನ ಹೆಸರು ಗಳಿಸಿದೆ. ಆದರೆ ಇದೇ ಜಿಲ್ಲೆಯ ಕುಂದಗೋಳ ತಾಲೂಕು ಈವರೆಗೆ ಅಭಿವೃದ್ಧಿ ಕಾಣದೇ ಅಭಿವೃದ್ಧಿ ವಂಚಿತ ಪ್ರದೇಶ ಎಂದೇ ಗುರುತಿಸಿಕೊಂಡಿರುವುದು ಇಲ್ಲಿನ ಸ್ಥಳೀಯ ಶಾಸಕರ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿಸಿದೆ.
ಕುಂದಗೋಳ ವಿಧಾನಕ್ಷೇತ್ರ ಅತಿಹೆಚ್ಚು ರೈತಾಪಿ ಕುಟುಂಬವಿರುವ ಕ್ಷೇತ್ರ. ಇಲ್ಲಿನ ಜನರು ಅತಿ ಬೇಗ ಭಾವನಾತ್ಮಕ ಮಾತುಗಳಿಗೆ ಕಟು ಬಿದ್ದು ಬೆಂಬಲಿಸುತ್ತಾರೆ. ಆದರೆ ಅದೇ ಇದೀಗ ಜನರಿಗೆ ಸಂಕಷ್ಟಕ್ಕೆ ದುಡಿದೀಯಾ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಇದಕ್ಕೆ ಪುಷ್ಟೀಕರಣ ನೀಡುವಂತೆ ಕ್ಷೇತ್ರದಲ್ಲಿನ ಸಾಲು ಸಾಲು ಸಮಸ್ಯೆಗಳೇ ಉದಾಹರಣೆಯಾಗಿಸಿವೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಯಾವೊಂದು ಗ್ರಾಮವು ಹೇಳಿಕೊಳ್ಳುವಂತಹ ಅಭಿವೃದ್ಧಿ ಕಂಡಿಲ್ಲ. ಅಗತ್ಯ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲರಾಗಿರುವ ಇಲ್ಲಿನ ಜನರು ತೀರಾ ಕೆಳಹಂತದಲ್ಲಿರುವುದಂತು ಸತ್ಯ.
ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಗಳಂತು ಹದಗೆಟ್ಟಿದ್ದು, ಅನೇಕ ಗ್ರಾಮಗಳಿಗೆ ಸಂಪರ್ಕಿಸುವ ಉತ್ತಮ ರಸ್ತೆಯಾಗಲಿ, ಸಮರ್ಪಕ ವಾಹನ ಸೌಲಭ್ಯವಾಗಲಿ ಇಲ್ಲದೇ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾಜಿ ಸಚಿವ ದಿವಂಗತ ಸಿ.ಎಸ್.ಶಿವಳ್ಳಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮಾಡುವ ಕನಸು ಕಂಡಿದ್ದರು. ಅದರಂತೆ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜನರು ಶಿವಳ್ಳಿ ಅವರ ಮೇಲಿಟ್ಟಿದ್ದ ಅಭಿಯಾನಕ್ಕೆ ಅನುಕಂಪದ ಮೇಲೆ ಗೆದ್ದು ಬಂದಿರುವ ಶಾಸಕಿ ಕುಸುಮಾವತಿ ಶಿವಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಿಂಚಿತ್ತು ಗಮನ ಹರಿಸದೇ ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿಯಾಗಿದೆ.