
ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದ ಹೊಲದಲ್ಲಿ ಕಡಲೆ ಬಣವಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಡಲೆ ಬಣವಿ ಸುಟ್ಟು ಕರಕಲಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಭೀಮಪ್ಪ ಸುಂಕದ ಎಂಬಾತರಿಗೆ ಸೇರಿದ ಬಣವಿ ಇದಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಕಡಲೆ ಬಣವಿ ಬೆಂಕಿಗೆ ಆಹುತಿಯಾಗಿದೆ.
ಈ ದುಷ್ಕತೃ ಮೆರೆದೆ ಕಿಡಿಗೇಡಿಗಳು ಯಾರು ಎಂಬುದು ತಿಳಿದುಬಂದಿಲ್ಲ.
ಇನ್ನೂ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಕಿಡಿಗೇಡಿಗಳಿಂದ ಅಪಾರ ಪ್ರಮಾಣದ ಕಡಲೆ ಹಾಳಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದ್ದು ನಮಗೆ ಪರಿಹಾರ ಒದಗಿಸಿಕೊಡಬೇಕು ಹಾಗೂ ಇಂತಹ ಹೀನ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಸಾಲ ಸೂಲಾ ಮಾಡಿ ಫಸಲು ಬೆಳೆದಿದ್ದೇವು ಆದರೆ ಎಲ್ಲಾ ಮಣ್ಣು ಪಾಲಾಗಿದೆ ಎಂದು ಭೀಮಪ್ಪ ಸುಂಕದ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನೂ ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಕುಂದಗೋಳ ರಸ್ತೆಯಲ್ಲಿ ರಾತ್ರಿ ಆದರೆ ಸಾಕು ಕುಡುಕರ ಹಾವಳಿ ಹೆಚ್ಚಾಗಿದ್ದು, ಬಿಡಿ, ಸಿಗರೇಟ್ ಸೇದುವವರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಯಾರೋ ಹಚ್ಚಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪೋಲಿಸರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡು ಹೊಲದಲ್ಲಿ ಕುಂತು ಕುಡಿಯುವ ಕುಡುಕರಿಗೆ ಬುದ್ದಿ ಕಲಿಸಬೇಕು ಎಂಬುದು ರೈತರ ಒತ್ತಾಯ ಆಗಿದೆ.