Top NewsUncategorizedಜಿಲ್ಲೆರಾಜಕೀಯರಾಜ್ಯ

ಗ್ರಾಮೀಣ ಭಾಗದ ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಮುಂದಾದ ಅದರಗುಂಚಿ ಗ್ರಾಮ ಪಂಚಾಯತಿ…!

ಹುಬ್ಬಳ್ಳಿ: ಯಾರು ಕಾನೂನಿಗೆ ಹೆದರುವ ಅವಶ್ಯಕತೆ ಇಲ್ಲ. ಬದಲಾಗಿ ಕಾನೂನು ಅರ್ಥ ಮಾಡಿಕೊಂಡು, ಕಷ್ಟ ಕಾಲದಲ್ಲಿ ಕಾನೂನು ಬಳಸಿ ರಕ್ಷಣೆ ಪಡೆದುಕೊಳ್ಳಬಹುದು ಎಂದು ಹುಬ್ಬಳ್ಳಿ ತಾಲೂಕು ಕಾನೂನು ಸೇನಾ ಸಮಿತಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ರಾಜಶೇಖರ ತಿಳಗಂಜಿ ಹೇಳಿದರು.

ಇಂದು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಇಲಾಖೆ ಹುಬ್ಬಳ್ಳಿ ಸಂಯುಕ್ತ ಆಶ್ರಮದಲ್ಲಿ ನಡೆದ ಮೆಗಾ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ತಾಯಿ ಹೊಟ್ಟೆಯಲ್ಲಿರುವ ಮಗುವಿನಿಂದ ಹಿಡಿದು ಸಾವನ್ನಪ್ಪಿದ ನಂತರವೂ ಅನ್ವಯವಾಗುತ್ತವೆ. ಈ ನಿಟ್ಟಿನಲ್ಲಿ ಸಮಾಜದ ಕಟ್ಟ ಕಡೆಯ ದುರ್ಬಲ ವ್ಯಕ್ತಿಗಳಿಗೂ ಸಹ ಕಾನೂನು ಅರಿವು ಮೂಡಬೇಕು. ಕಡು ಬಡತನದಿಂದ ಯಾರೂ ಕೂಡಾ ಕಾನೂನು ನೆರವಿನಿಂದ ವಂಚಿತರಾಗಬಾರದು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರೆಯಬೇಕಾಗಿದೆ. ಎಲ್ಲರಿಗೂ ಉಚಿತವಾಗಿ ಕಾನೂನು ನೆರವು ದೊರೆಯುವ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿ ಇದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು‌.

ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಕಳೆದಿವೆ. ಆದರೆ ಈವರೆಗೆ ಜನರಿಗೆ ಸರಿಯಾದ ಸವಲತ್ತುಗಳು ದೊರೆಯುತ್ತಿಲ್ಲ ಎಂಬುದು ವಿಷಾದನೀಯ. ಈಗಾಗಲೇ ಕಳೆದ ವಿವಿಧ ಗ್ರಾಮಗಳಲ್ಲಿ 15 ದಿನಗಳಿಂದ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಕಾನೂನುಗಳು ಚೆನ್ನಾಗಿವೆ. ಆದರೆ ಅದನ್ನು ಅರಿಯದ ಜನರಿಗೆ ಕಾನೂನು ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ಅರಿವಿನ ಕೊರತೆಯಿಂದ ಸದುಪಯೋಗ ಪಡೆಯಲು ಆಗುತ್ತಿಲ್ಲ. ಎಲ್ಲರೂ ಹೆಚ್ಚು ಕಾನೂನನ್ನು ಓದಿ ಅರಿತು ಕಷ್ಟದ ಸಮಯದಲ್ಲಿ ಕಾನೂನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಕೀಲರಾದ ಸವಿತಾ ಪಾಟೀಲ್ ಉಪನ್ಯಾಸ ನೀಡಿ, ಕಾನೂನಿನ ಮುಂದೆ ಎಲ್ಲರೂ ಸಮಾನರು, ಯಾರು ಮೇಲು, ಕೀಳು ಎಂಬುದಿಲ್ಲ ಆದರೆ ವಾಸ್ತವದಲ್ಲಿ ಇದು ಕಂಡುಬರುತ್ತಿಲ್ಲ ಎಂಬುದು ದುರ್ದೈವ, ಪರಿಸರ ಯಾವ ರೀತಿ ಮಾನವನಿಗೆ ಅವಶ್ಯವೋ. ಹಾಗೇ ಕಾನೂನಿನ ಅರಿವು ಮನುಷ್ಯನಿಗೆ ಜೀವವಿದ್ದಂತೆ. ಯಾರೇ ತಪ್ಪು ಮಾಡಲಿ ಕಾನೂನಿನಲ್ಲಿ ಅವರಿಗೆ ಶಿಕ್ಷೆ ಎಂಬುದಿದೆ. ಸಂವಿಧಾನ ಮನುಷ್ಯನಿಗೆ ಹಕ್ಕಿನ ಜೊತೆಗೆ ಕರ್ತವ್ಯವನ್ನು ಕೊಟ್ಟಿದೆ. ಅದನ್ನು ಅರಿತು ನಡೆದುಕೊಳ್ಳಬೇಕು ಎಂದರು.

ದೇಶ ಎಷ್ಟೇ ಮುಂದುವರೆಯುತ್ತಿದ್ದರು, ನಮ್ಮ ಸಮಾಜ ಪುರುಷ ಪ್ರಧಾನವಾಗಿದೆ. ಮಹಿಳೆಯ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೆ ಕಾನೂನಿನಲ್ಲಿ ಹೆಚ್ಚು ಮಹಿಳೆಯರ ಪರವಾದ ಕಾನೂನುಗಳಿವೆ. ಈ ಬಗ್ಗೆ ಮಹಿಳೆಯರು ಜಾಗೃತಗೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಜನರಿಗೆ ಕಾನೂನು ಅರಿವು ತುಂಬಾ ಕಡಿಮೆ. ಇದೀಗ ನ್ಯಾಯಲಯವೇ ಗ್ರಾಮಕ್ಕೆ ಬಂದು ಜನರಿಗೆ ಕಾನೂನು ಅರಿವಿನ ಜೊತೆಗೆ ನ್ಯಾಯ ಒದಗಿಸುವುದು ಖುಷಿಯ ಸಂಗತಿ ಎಂದರು.

ಮುಕ್ತುಂಹುಸೇನ ಕರಡಿಗುಡ್ಡ, ಪಿಡಿಓ, ಅದರಗುಂಚಿ

ನಂತರ ಗ್ರಾಮಸ್ಥರ ಪ್ರಶ್ನೆಗಳಿಗೆ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಉತ್ತರಿಸಿದರು.

ಸಿದ್ದನಗೌಡ ಕಂಟೆಪ್ಪಗೌಡ್ರ, ಅಧ್ಯಕ್ಷರು, ಅದರಗುಂಚಿ ಗ್ರಾಮ ಪಂಚಾಯತಿ

ಮುಕ್ತುಂಹುಸೇನ ಬಡಿಗೇರ್, ಮಾಜಿ ಉಪಾಧ್ಯಕ್ಷರು, ಹಾಲಿ ಸದಸ್ಯರು, ಅದರಗುಂಚಿ ಗ್ರಾಮ ಪಂಚಾಯತಿ

ಹೊನ್ನಪ್ಪ ಸೋಲಾರಗೊಪ್ಪ, ಸದಸ್ಯರು, ಅದರಗುಂಚಿ ಗ್ರಾಮ ಪಂಚಾಯತಿ ಸದಸ್ಯರು

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಉಪ ತಹಶಿಲ್ದಾರ ಗಣೇಶ ಹುಬ್ಬಳ್ಕರ್, ಸಿಡಿಪಿಓ ಸೂಪರ್ ವೈಸರ್ ಪವಿತ್ರಾ ಎಲಿವಾಳ, ಚಂದ್ರಶೇಖರ ಕುರ್ತುಕೋಟಿ, ಮಾಜಿ ಜಿ.ಪಂ ಸದಸ್ಯ ಜಿ.ವಿ.ಕಳ್ಳಿಮನಿ, ವಕೀಲರಾದ ಜಿ‌.ಎಫ್.ಸಂಕಣ್ಣವರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುಕ್ತುಂಹುಸೇನ ಕರಡಿಗುಡ್ಡ, ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದನಗೌಡ ಕಂಟೆಪ್ಪಗೌಡ್ರ, ಸದಸ್ಯರಾದ ಮುಕ್ತುಂಹುಸೇನ ಬಡಿಗೇರ್, ಹೊನ್ನಪ್ಪ ಸೋಲಾರಗೊಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ವಕೀಲರ ಸಂಘದ ಸದಸ್ಯರು, ಗ್ರಾಮದ ಎಲ್ಲ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಸುಭಾಷ್ ಅಂಚಿ, ಸ್ವಾಗತವನ್ನು ಮಧು ಹರ್ತಿ ಮಾಡಿದರು‌.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button