ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದ ಶ್ರೀ ಕೊರಮ್ಮದೇವಿ ಗ್ರಾಮೀಣ ಸರ್ವೋದಯ ಸೇವಾ ಸಂಘ ಮತ್ತು ರೈತ ಸಂಘ ಸುಳ್ಳ ಇವರ ವತಿಯಿಂದ ಐದನೇ ವರ್ಷದ ಸರ್ವಧರ್ಮ ಉಚಿತ ಸಾಮೂಹಿಕವಾಗಿ ವಿವಾಹ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 19ಕ್ಕೆ ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕೊರಮ್ಮದೇವಿ ಗ್ರಾಮೀಣ ಸರ್ವೋದಯ ಸೇವಾ ಸಂಘ ಮತ್ತು ರೈತ ಸಂಘದಿಂದ 101 ಜೋಡಿಗಳ ಸಾಮೂಹಿಕವಾಗಿ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಮುದಕಣ್ಣ ಕಂಕೊಳ್ಳಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇನ್ನು ವಿವಾಹ ಸಂಪೂರ್ಣ ಉಚಿತವಾಗಿದ್ದು ವಧುವಿಗೆ ಅರಿಶಿಣ ಸೀರೆ, ಬೆಳ್ಳಿ ಕಾಲುಂಗುರ, ಬಾಶಿಂಗ, ದಂಡಿ ಜೊತೆಗೆ ವರನಿಗೆ ಪಂಚೆ ಶರ್ಟ್ ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ನೋಂದಣಿ ಮಾಡಿಸಲು ಇಚ್ಚಿಸುವವರು 96201 29016 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವ ತಿಳಿಸಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1