Uncategorized
ಏ.28ಕ್ಕೆ ಎಸ್.ಎಸ್.ಕೆ. ಸಮಾಜದಿಂದ ಸಾಮೂಹಿಕ ವಿವಾಹ ಮತ್ತು ಉಪನಯನ

ಗದಗ-ಬೆಟಗೇರಿ : ಇಲ್ಲಿನ ಎಸ್.ಎಸ್.ಕೆ. ಪಂಚ ಟ್ರಸ್ಟ್ ಕಮೀಟಿ, ತರುಣ ಸಂಘ ಹಾಗೂ ಜಗದಂಬಾ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವೈಶಾಖ ಶುದ್ಧ ದ್ವಾದಶಿ ದಿನ ಬೆಟಗೇರಿಯ ಅಂಬಾಭವಾನಿ ದೇವಿಯ 111 ನೇ ಪ್ರಾಣ ಪ್ರತಿಷ್ಠಾಪನಾ ದಿನದ ಆಚರಣೆಯ ಅಂಗವಾಗಿ ಎಸ್.ಎಸ್.ಕೆ. ಸಮಾಜ ಬಾಂಧವರ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವನ್ನು ಏಪ್ರಿಲ್ 28ನೇ ರಂದು ಬೆಟಗೇರಿಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಇನ್ನೂ ಈ ಕಾರ್ಯಕ್ರಮದ ನಿಮಿತ್ತವಾಗಿ ಏಪ್ರಿಲ್ 26ರಿಂದ 28ರ ವರೆಗೆ ಶ್ರೀದೇವಿಗೆ ಅಲಂಕಾರ, ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ ಮತ್ತು ಏಪ್ರಿಲ್ 28ರಂದು ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮಗಳು ನಡೆಯಲಿವೆ.

ಮಾರ್ಚ್ 26 ರಿಂದ ಎಪ್ರಿಲ್ 25ರವರೆಗೆ ಸಾಮೂಹಿಕ ಉಪನಯನ ಹಾಗೂ ವಿವಾಹದ ನೊಂದಣಿ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ 9448309622, 9448629772, 9880338064, 9448211933 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1



