“*ಭಕ್ತಿಭಾವದಿಂದ ಜರುಗಿದ ಮಹಾಪೂಜೆ: ಶ್ರೀರಾಮ ಸೇನೆ ಮುಂಡಗೋಡ ಘಟಕದಿಂದ ಭವ್ಯ ಕಾರ್ಯಕ್ರಮ”*
ವಿಜಯದಶಮಿ ಹಬ್ಬದ ನಿಮಿತ್ಯ ಶ್ರೀರಾಮ ಸೇನೆ ಮುಂಡಗೋಡ್ ವತಿಯಿಂದ ಮಹಾಪೂಜೆ
ಹಿಂದೂ ಧಾರ್ಮಿಕ ಸಂಸ್ಕೃತಿಯಲ್ಲಿ ವಿಜಯದಶಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಅಸುರನ ಮೇಲೆ ಸತ್ಯ-ಧರ್ಮಗಳ ವಿಜಯವನ್ನು ಪ್ರತಿಪಾದಿಸುವ ಈ ಹಬ್ಬವನ್ನು ದೇಶದಾದ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ರಾಮಾಯಣದ ಪ್ರಕಾರ ಶ್ರೀರಾಮನು ರಾವಣನನ್ನು ಸಂಹರಿಸಿದ ದಿನವೇ ವಿಜಯದಶಮಿ. ಶಕ್ತಿ, ಧೈರ್ಯ ಮತ್ತು ಸತ್ಯದ ಪ್ರತೀಕವಾಗಿರುವ ಈ ಹಬ್ಬವು ಜನರಲ್ಲಿ ಹೊಸ ಉತ್ಸಾಹ, ನಂಬಿಕೆ ಹಾಗೂ ಭಕ್ತಿ ಭಾವನೆಗಳನ್ನು ತುಂಬುತ್ತದೆ.
ಇದೀಗ, ವಿಜಯದಶಮಿ ಹಬ್ಬದ ಸಂಭ್ರಮದ ಅಂಗವಾಗಿ ಮುಂಡಗೋಡ ತಾಲ್ಲೂಕಿನ ಬನ್ನಿಕಟ್ಟಿ ಬನ್ನಿ ಮಹಾಕಾಳಿ ದೇವಾಲಯದಲ್ಲಿ ಶ್ರೀರಾಮ ಸೇನೆ ಮುಂಡಗೋಡ ಘಟಕದ ವತಿಯಿಂದ ಭವ್ಯ ಮಹಾಪೂಜೆ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮ ನೆರವೇರಿತು. ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಎಚ್.ಪಿ., ಸುರೇಶ್ ಕಲ್ಲೊಳ್ಳಿ, ಕುಮಾರ್ ತಳವಾರ, ರವಿ ತಳವಾರ ಹಾಗೂ ಸಂಘಟನೆಯ ಕಾರ್ಯದರ್ಶಿಗಳು ಉಪಸ್ಥಿತರಿದ್ದು, ಕಾರ್ಯವನ್ನು ಯಶಸ್ವಿಗೊಳಿಸಿದರು. ಭಕ್ತರ ಉತ್ಸಾಹ ಮತ್ತು ಸಂಘಟಕರ ಸೇವಾ ಮನೋಭಾವದಿಂದ ಈ ವಿಜಯದಶಮಿ ವಿಶೇಷ ಕಾರ್ಯಕ್ರಮವು ಭವ್ಯವಾಗಿ ಜರುಗಿತು.
ವರದಿ ಶಶಿಕಾಂತ್ ಕೊರವರ್




