Top News

ಹು-ಧಾ ಲಾರಿ ಮಾಲಕರೇ ಹಾಗೂ ಚಾಲಕರೇ ಹುಷಾರ್..!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಚರಿಸುವ ಭಾರಿ ಸರಕು ಸಾಗಾಣಿಕೆ ವಾಹನಗಳ ಕುರಿತಾಗಿ ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ನೂತನ ಆದೇಶ ಹೊರಡಿದ್ದಾರೆ.

ವ್ಯಾಪರ ವಹಿವಾಟಿಗೆ ಯಾವುದೇ ರೀತಿ ತೊಂದರೆ ಮತ್ತು ವಾಹನ ದಟ್ಟಣೆ ನಿಯಂತ್ರಣ ಮಾಡುವ ಉದ್ದೇಶದಿಂದ ಅವಳಿನಗರದಲ್ಲಿ ಭಾರಿ ಸರಕು ವಾಹನಗಳು ಸಂಚರಿಸಲು ಸಮಯ ಪರಿಷ್ಕರಿಸಿದ್ದು, ಪ್ರತಿದಿನ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ನಗರದಲ್ಲಿ ಭಾರಿ ಸರಕು ವಾಹನಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.

ಇನ್ನೂಳಿದ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಭಾರಿ ಸರಕು ವಾಹನಗಳ ಸಂಚಾರ ನಿರ್ಭಂದಿಸಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಕಾರಣ ಸಂಬಂಧ ಪಟ್ಟ ಭಾರಿ ಸರಕು ವಾಹನಗಳ ಮಾಲಿಕರು, ಚಾಲಕರು ಈ ಆದೇಶವನ್ನು ತಪ್ಪದೆ ಪಾಲಿಸಲು ಸೂಚಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button