Uncategorizedಜಿಲ್ಲೆಸ್ಪೋರ್ಟ್ಸ್

ಲೆದರ್ ಬಾಲ್ ಕ್ರಿಕೆಟ್ ಆಯೋಜನೆ ವಿನೂತನ ಪ್ರಯೋಗ: ಕೆ. ಎಚ್ ಪಾಟೀಲ

ಗದಗ: ‘ಇತ್ತೀಚಿನ ದಿನಗಳಲ್ಲಿ ಟೆನ್ನಿಸ್ ಬಾಲ್ ಗಿಂತ ಲೆದರ್ ಬಾಲ್ ಪಂದ್ಯಾವಳಿಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ಸರ್ಕಾರಿ ನೌಕರರು ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು ಸಂತಸದ ವಿಷಯವಾಗಿದೆ’ ಅಂತ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಎಚ್ ಪಾಟೀಲ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಗದಗ ಜಿಲ್ಲೆಯಲ್ಲಿ ಇದೇ ಪ್ರ-ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದ್ದ ರೀಪಬ್ಲಿಕ್ ಕಪ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಒತ್ತಡದ ನಡುವೆಯೂ ಸರ್ಕಾರಿ ನೌಕರರು ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದಾರೆ. ಟೆನ್ನಿಸ್ ಬಾಲ್ ಕ್ರಿಕೆಟ್ ಆಟವಾಡಿ ಮುಗಿಸಬಹುದಿತ್ತು. ಆದರೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಹಾಗೂ ಅವರ ಪದಾಧಿಕಾರಿಗಳ ಮುತವರ್ಜಿಯಿಂದಾಗಿ ಲೆದರ್ ಬಾಲ್ ಪಂದ್ಯಾವಳಿಗಳು ನಡೆಯುತ್ತಿರುವುದು ಹೆಮ್ಮೆ ಎನಿಸಿದೆ. ಈ ಪಂದ್ಯಾವಳಿಯನ್ನು ಆಡುವಾಗ ಗಾಯದ ಸಮಸ್ಯೆ ಹೆಚ್ಚು ಕಾಡುತ್ತದೆ. ಈ ಬಗ್ಗೆ ಗಮನ ಹರಿಸಿ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಅಂತ ನೌಕರರ ಬಗ್ಗೆ ಕೆ. ಎಚ್ ಪಾಟೀಲ್ ಕಳಕಳಿ ವ್ಯಕ್ತಪಡಿಸಿದರು.

ನಿಕಟ ಪೂರ್ವ ಜಿಲ್ಲಾಧ್ಯಕ್ಷ ರವಿ ಎಲ್ ಗುಂಜೀಕರ ಮಾತನಾಡಿ, ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಉತ್ತಮ ಗದಗ ಜಿಲ್ಲಾ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಡಾ. ಬಸವರಾಜ ಬಳ್ಳಾರಿ ನೇತೃತ್ವದಲ್ಲಿ ಲೆದರ್ ಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ನಿಜವಾದ ಪ್ರತಿಭೆಗಳನ್ನು ಗುರುತಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಅಂತ ಭಾಗವಹಿಸಿದ್ದ ಆಟಗಾರರಿಗೆ ಕಿವಿಮಾತು ಹೇಳಿದರು.

ಪಂದ್ಯಾವಳಿಯ ಪ್ರಾರಂಭದಲ್ಲಿ ಮಾಧ್ಯಮ ತಂಡ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಂಡಗಳು ಸಾಂಕೇತಿಕವಾಗಿ ಒಂದು ಪಂದ್ಯವನ್ನು ಆಡಿದವು. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಂಡ 11 ರನ್ ಗಳ ಭರ್ಜರಿ ಜಯ ಸಾಧಿಸಿತು.

ಈ ವೇಳೆ ಕ್ರೀಡಾ ಇಲಾಖೆಯ ಅಧಿಕಾರಿ ಡಾ. ಶರಣು ಗೋಗೇರಿ, ಸಿದ್ದು ಪಾಟೀಲ, ಡಿ. ಎಸ್ ತಳವಾರ, ಮಾಂತೇಶ್ ನಿಟ್ಟಾಲಿ, ಮುತ್ತು ಮಲಕಶೆಟ್ಟಿ, ಇಮಾಮ್ ಹುಸೇನ್ ಗಾಡಗೋಳಿ, ಸಿದ್ದಪ್ಪ ಲಿಂಗದಾಳ, ರಾಜು ಕಂಟಗೊಣ್ಣನವರ, ದೇವಪ್ಪ ದುರಗಣ್ಣನವರ, ಶ್ರೀಧರ್ ಚಿನಗುಂಡಿ, ಪಾರ್ವತಿಮಠ, ನಾಗರಾಜ ಹಳ್ಳಿಕೇರಿ, ಮಲ್ಲಿಕಾರ್ಜುನ ಹಿರೇಮಠ, ದ್ಯಾಮನಗೌಡ್ರ, ಮಹೇಶ್ ಕುರಿ, ಎಸ್. ಎಸ್ ಕುಂದಗೋಳ, ಪಾಷಾ ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಎಲ್ಲ ತಾಲ್ಲೂಕಾಧ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕ್ರೀಡೆ ನೆಪಮಾತ್ರಕ್ಕೆ ಆಗಬಾರದು:

ಕ್ರೀಡೆ ಎನ್ನುವುದು ಕೇವಲ ನೆಪಮಾತ್ರಕ್ಕೆ ಆಗಬಾರದು. ಅದಕ್ಕೆ ಬೇಕಾಗಿರುವ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿದಾಗ ಕ್ರೀಡಾಕೂಟಗಳು ಯಶಸ್ವಿ ಆಗಲು ಸಾಧ್ಯವಾಗುತ್ತದೆ. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರ ವರ್ಗದವರ ಸಹಕಾರದೊಂದಿಗೆ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆದಿದೆ. ಫೈನಲ್ ತಲುಪಿರುವ ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ತಂಡಕ್ಕೆ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪರವಾಗಿ ಅಭಿನಂದನೆಗಳು.

-ಡಾ. ಬಸವರಾಜ ಬಳ್ಳಾರಿ
ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಗದಗ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button