Uncategorizedಜಿಲ್ಲೆರಾಜ್ಯ
ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ
ಹುಬ್ಬಳ್ಳಿ: ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಎಸ್ ಸಿ ಕಾಲೊನಿಯಲ್ಲಿ 22 ಲಕ್ಷ ರೂ ಗಳಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ ರಸ್ತೆಯ ಕಾಮಗಾರಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಭೂಮಿ ಪೂಜೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿಯೂ ಕೂಡಾ ಉತ್ತಮವಾದ ಗುಣಮಟ್ಟದ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ತಮ್ಮ ಗ್ರಾಮಕ್ಕೆ ಒದಗಿಸಿದ್ದು ಅದರ ಉಪಯೋಗವನ್ನು ತಾವು ಪಡಿಸಿಕೊಳ್ಳಬೇಕು. ಅಲ್ಲದೇ ಗ್ರಾಮದ ಯಾವ ಯಾವ ವಾರ್ಡಿನಲ್ಲಿ ರಸ್ತೆಗಳಿಲ್ಲ ಅಲ್ಲಿ ಶೀಘ್ರದಲ್ಲಿಯೇ ರಸ್ತೆಗಳನ್ನು ಒದಗಿಸಿ ಅವರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಮಾಳಪ್ಪನವರ, ಆನಂದ ಪೂಜಾರ, ನೂರಅಹ್ಮದ ಗಡಾದ, ಮಾಬುಬ ಮುಲ್ಲಾನವರ, ಗ್ರಾಮದ ಸ್ಥಳೀಯ ಗುರು ಹಿರಿಯರು ಮುಖಂಡರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1