ಹುಬಳ್ಳಿಯಲ್ಲಿ ನಡುರಾತ್ರಿ ರೌಡಿಶೀಟರ್ ನನ್ನು ಕೊಚ್ಚಿ ಭೀಕರ ಕೊಲೆ…!
ಕೊಲೆ ಬಗ್ಗೆ ಕುಟುಂಬಸ್ಥರು ಹೇಳಿದ್ದೇನು? ಕಂಪ್ಲೀಟ್ ವರದಿ👆
ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಕೊಲೆ, ರೌಡಿಶೀಟರ್ ಹತ್ಯೆ. ಚೋಟಾ ಮುಂಬೈನಲ್ಲಿ ಮತ್ತೆ ತಲವಾರು ಝಳಪಿಸಿದೆ. ಕಾರವಾರ ರಸ್ತೆಯ ಅರವಿಂದ ನಗರದ ಪಿಎನ್ ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ತೊರವಿಹಕ್ಕಲದ ನಿವಾಸಿ ಅಕ್ಬರ್ ಅಲ್ಲಾಭಕ್ಷ್ಯ ಮುಲ್ಲಾ ಎಂದು ಗುರುತಿಸಲಾಗಿದೆ.
ಈತ ಗುರುವಾರ ರಾತ್ರಿ ಕುಡಿದು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಇಂದಿರಾನಗರದ ನವೀನ್, ಹಾಗೂ ಸದಾನಂದ ಸೇರಿದಂತೆ ಮತ್ತಿಬ್ಬರು ರಾತ್ರಿ 1 ಗಂಟೆಗೆ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಮುಖ, ಕುತ್ತಿಗೆ ಸೇರಿದಂತೆ ಇತರ ಸ್ಥಳಗಳಿಗೆ ಹೊಡೆದು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿದ ಆರೋಪಿಯೋರ್ವನೇ ತಾನೇ ಕೊಲೆ ಮಾಡಿದ್ದೆನೆಂದು ಒಪ್ಪಿಕೊಂಡು ಠಾಣೆಗೆ ಬಂದು ಶರಣಾಗಿದ್ದಾನೆ. ಈ ಘಟನೆಗೆ ಹಣಕಾಸಿನ ವಿಷಯ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈ ಕುರಿತು ನಿಖರವಾದ ಮಾಹಿತಿ ಪೋಲಿಸ್ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ.