Top Newsಜಿಲ್ಲೆ

ಪೊಲೀಸರಿಗೆ 100 ಬ್ಯಾರಿ ಕೇಡ್ ವಿತರಣೆ ಮಾಡಿದ KGP ಗ್ರೂಪ್ – ಪೊಲೀಸರ ಕಾರ್ಯಕ್ಕೆ ಕೈ ಜೋಡಿಸಿದ ಶ್ರೀಗಂಧ ಶೇಟ್

ಹುಬ್ಬಳ್ಳಿ: ಹುಬ್ಬಳ್ಳಿಯ KGP ಗ್ರೂಪ್ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದು, ಈ ಒಂದು ನಿಟ್ಟಿನಲ್ಲಿ ನಗರದಲ್ಲಿ ಮತ್ತೊಂದು ಕಾರ್ಯವನ್ನು ಮಾಡಿತು.

ಹೌದು, ಸದಾ ವ್ಯಾಪಾರ ವಹಿವಾಟು ಎಂದುಕೊಂಡು ಕುಳಿತುಕೊಳ್ಳದ ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಹತ್ತಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಸಮಾಜಮುಖಿಯಾಗಿ ಮಾಡ್ತಾ ಇದೆ ಎನ್ನೊದಕ್ಕೆ ಸಂಘಟನೆ ಮಾಡುತ್ತಿರುವ ಹತ್ತಾರು ಕೆಲಸ ಕಾರ್ಯಗಳು ಸಾಕ್ಷಿ. ಈಗಾಗಲೇ ಒಂದಿಲ್ಲೊಂದು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಈ ಒಂದು ಗ್ರೂಪ್ ಸಧ್ಯ ಮತ್ತೊಂದು ಮಹಾನ್ ಕೆಲಸವನ್ನು ಮಾಡಿದೆ ಹೌದು ಕಳೆದ ವಾರ ಅಷ್ಟೇ 1000 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಣೆ ಮಾಡಿದ ಬೆನ್ನಲ್ಲೇ ಸಧ್ಯ ಪೊಲೀಸರಿಗೆ 100 ಬ್ಯಾರಿ ಕೇಡ್ ಗಳನ್ನು ನೀಡುವ ಮೂಲಕ ಈ ಒಂದು ಕೆಜಿಪಿ ಗ್ರೂಪ್ ಮತ್ತೊಂದು ಸಮಾಜ ಮುಖಿಯಾದ ಕಾರ್ಯವನ್ನು ಮಾಡಿದೆ.

ಕೆಜಿಪಿ ಫೌಂಡೇಶನ್ ಹಾಗೂ ಕೆಜಿಪಿ ಗ್ರೂಪ್ ಆಫ್ ಕಂಪನೀಸ್ ಈ ಒಂದು ಸಂಘಟನೆಗಳಿಂದ ನಗರದಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಬ್ಯಾರಿ ಕೇಡ್ ಗಳನ್ನು ಹಸ್ತಾಂತರ ಮಾಡಲಾಯಿತು. ಶ್ರೀಗಂಧ ಶೇಟ್ ಗಣೇಶ ಶೇಟ್ ಅಧ್ಯಕ್ಷರು ಕೆಜಿಪಿ ಫೌಂಡೇಶನ್ ಹಾಗೂ ಮಾಲೀಕರು ಕೆಜಿಪಿ ಗ್ರೂಪ್ ಆಫ್ ಕಂಪನೀಸ್ ಅವರ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು.

ಶಾಲಾ ಬೆಂಬಲ ಕಾರ್ಯಕ್ರಮದ ಬೆನ್ನಲ್ಲೇ ಪೊಲೀಸರಿಗೆ ಬ್ಯಾರಿ ಕೇಡ್ ಗಳನ್ನು ಕೆಜಿಪಿ ಗ್ರೂಪ್ ನಿಂದ ನೀಡಲಾಯಿತು. ಇದರೊಂದಿಗೆ ಮತ್ತೊಂದು ಸಾಮಾಜಿಕ ಜವಾಬ್ದಾರಿ ಯ ಕಾರ್ಯ ವನ್ನು ನ್ನು ಶ್ರೀಗಂಧ ಶೇಟ್ ಅವರು ಮಾಡಿದರು.

ಉಚಿತವಾಗಿ ಪೊಲೀಸರಿಗೆ ಇವುಗಳನ್ನು ಹಸ್ತಾಂತರ ಮಾಡಲಾಯಿತು ಇದರೊಂದಿಗೆ ಕೆಜಿಪಿ ಗ್ರೂಪ್ ಮತ್ತೊಂದು ಸಮಾಜಮುಖಿಯಾದ ಕೆಲಸವನ್ನು ಮಾಡುವ ಮೂಲಕ ಮಾದರಿಯಾಗಿದೆ. ಗಣೇಶ ಶೇಟ್ ಅವರ ಮಾರ್ಗದರ್ಶನದಲ್ಲಿ ಶ್ರೀಗಂಧ ಶೇಟ್ ಅವರು ಈ ಒಂದು ಕಾರ್ಯವನ್ನು ಮಾಡಲಾಯಿತು.

ಇದೇ ವೇಳೆ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತಮಾಡಿ, ಕೆಜಿಪಿ ಗ್ರೂಪ್ ಕಾರ್ಯ ವನ್ನು ಶ್ಲಾಘಿಸಿದರು. ಇನ್ನೂ ಕೆಜಿಪಿ ಗ್ರೂಪ್ ಅಧ್ಯಕ್ಷ ಶ್ರೀಗಂಧ ಶೇಟ್ ಮಾತನಾಡಿ ಬರುವ ದಿನಗಳಲ್ಲಿ ಗ್ರೂಪ್ ನಿಂದ ಮತ್ತಷ್ಟು ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button