ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಜ್ಞಾನ ಭಾರತಿ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಈ ವೇಳೆ ಸಂಸದ ಪ್ರಲ್ಲಾದ ಜೋಶಿ ಅವರ ಪತ್ನಿ ಹಾಗೂ ಸಮಾಜ ಸೇವಕಿ ಜ್ಯೋತಿ ಜೋಶಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ತಾಯಿ ಕನ್ನಡಾಂಬೆಗೆ ನಮಸ್ಕರಿಸಿ 2024ರ ಕಂಪ್ಯೂಟರ ಯುಗದಲ್ಲಿ ಎಲ್ಲರೂ ಕನ್ನಡ ಕಲಿಕೆ ಬಹಳ ವಿರಳವಾಗಿದೆ. ಎಲ್ಲರೂ ಆಂಗ್ಲ ಮಾಧ್ಯಮದಲ್ಲಿ ಕಲ್ಲಿಯುತ್ತಿದ್ದಾರೆ. ಎಷ್ಟೋ ಮಕ್ಕಳಿಗೆ ಕನ್ನಡ ಸಂಖ್ಯೆಗಳ ಬರಲ್ಲ ಅದ್ದರಿಂದ ಮಕ್ಕಳಲ್ಲಿ ಶಿಕ್ಷಕರು ಕನ್ನಡದ ಅರಿವು ಮೂಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾದ ಪತ್ರಕರ್ತ ಡಾ.ವೀರೇಶ ಹಂಡಗಿ, ನಿವೃತ್ತ ಪ್ರಾಧ್ಯಾಪಕ ವಿಠ್ಠಲ ಜಾಧವ ಸೇರಿದಂತೆ ಸಮಾಜ ಸೇವಕಿ ಪಾರ್ವತಿ ಹಿಪ್ಪರಗಿ, ಅನು ಮತ್ತು ಗುರು ಫೌಂಡೇಶನ್, ಪ್ರಾಚಾರ್ಯರಾದ ಪ್ರೇರಣಾ ಶಿಂಧೆ ಪಾಲ್ಗೊಂಡಿದ್ದರು.
ಬಳಿಕ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸರೋಜಾ ಕಟ್ಟಿ ಸ್ವಾಗತ ಗೀತೆ ಹಾಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುನಿಲ ಮನ್ನೂರಕರ, ಟ್ರಿಜಾ, ಲೀಯಿಸ್, ಕೀರ್ತಿ, ಕುಲಕರ್ಣಿ, ಕೀರ್ತಿ ಬಳ್ಳಾರಿ, ರವಿ ಈರಗಾರ ಜೀವನ ಗುಡನಾಳ, ದೀಪಾ ಪಾಟೀಲ, ಸುವರ್ಣ ಬಾರಿವನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.