Top NewsUncategorizedರಾಜ್ಯಸಿನಿಮಾ
Trending

ಕನ್ನಡ ಸಿನಿಮಾ ಪ್ರಿಯರನ್ನು ಸೀಟ್ ಎಡ್ಜ್ ನಲ್ಲಿ ಕೂರಿಸಲಿದೆ ಥ್ರಿಲ್ಲರ್ ಮೂವಿ ” ಜೂಲಿಯೆಟ್ 2″

ಬೆಂಗಳೂರು: ಇದೇ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳ್ಳಲು ಚಿತ್ರಗಳು ಒಂದರ ಹಿಂದೆ ಒಂದು ಸಾಲಿನಲ್ಲಿ ನಿಂತಿವೆ. ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್ ಬರ್ಡ್ಸ್”, ಗಣೇಶ್ ಅಭಿನಯದ ಬಾನ “ದಾರಿಯಲ್ಲಿ” , ಡಾಲಿ ಅಭಿನಯದ “ಹೊಯ್ಸಳ”. ಉಪ್ಪಿ ಅಭಿನಯದ”ಕಬ್ಜ”. ಇವುಗಳ ನಡುವೆ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿರುವ ಹೊಸಬರ ಚಿತ್ರ “ಜೂಲಿಯೆಟ್ 2”.

 

ಚಿತ್ರದ ಟೀಸರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿದ್ದು , ಕಾಂತಾರ ಚಿತ್ರದ ರೀತಿ ಕರಾವಳಿಯ ವೈಭವನ್ನು ಮತ್ತಷ್ಟು ಮೆರಗುಗೊಳಿಸುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಎಂದು ತೋರಿಸಲಾಗಿದೆ.

ಜೂಲಿಯೆಟ್, ಒಬ್ಬ ಸ್ವತಂತ್ರ ಮಹಿಳೆ ತನ್ನ ತಂದೆಯೊಂದಿಗೆ ತುಂಬಾ ಪ್ರೀತಿಯ , ಶ್ರದ್ಧೆಯುಳ್ಳ ಮತ್ತು ಕಾಳಜಿಯುಳ್ಳ ಮಗಳು, ಅವಳು ಯಾವಾಗಲೂ ತನ್ನ ತಂದೆಯ ಕನಸುಗಳನ್ನು ಪೂರೈಸಲು ಬಯಸುತ್ತಿರುತ್ತಾಳೆ . ಒಂದು ರಾತ್ರಿ, ಅವಳು ತನ್ನ ಹಿಂದಿನ ಆಘಾತಗಳನ್ನು ಪ್ರಚೋದಿಸುವ ಮತ್ತು ಮರುಸಂಪರ್ಕಿಸುವ ಭಯಾನಕ ಘಟನೆಗೆ ಸಾಕ್ಷಿಯಾಗುತ್ತಾಳೆ. ಪ್ರತೀಕಾರದ ದಾಳಿಯ ಅಸ್ತವ್ಯಸ್ತವಾಗಿರುವ ವೃತ್ತದ ಸುತ್ತ ಕಥೆ ಸುತ್ತುತ್ತದೆ. ಆ ಕತ್ತಲೆಯ ಬಾಗಿಲುಗಳ ಹಿಂದಿನ ಕ್ರೂರತೆ ಮತ್ತು ಅದರ ಸುತ್ತ ನಡೆಯುವ ಘಟನೆಗಳು ಚಿತ್ರದ ಮುಖ್ಯ ಕಥೆಯಾಗಿದೆ ಎಂಬುದನ್ನು ನಾವು ಚಿತ್ರದ ಟೀಸರ್ ಮೂಲಕ ತಿಳಿಯಬಹುದಾಗಿದೆ.

ವಿರಾಟ್ ಗೌಡ ಅವರ ನಿರ್ದೇಶನದ ಜೂಲಿಯೆಟ್ 2 ಸಿನೆಮಾ ಇದೇ ಫೆಬ್ರವರಿ 24 ರಂದು ದೇಶದಾದ್ಯಂತ ತೆರೆ ಕಾಣಲಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button