ರಾಜ್ಯ ಸರಕಾರದ”ಯುವ ನಿಧಿ ಪ್ಲಸ್” ಯೋಜನೆಯಿಂದ ಉದ್ಯೋಗ ಸೃಷ್ಟಿ: ಗೌರಮ್ಮಾ ಬಲೋಗಿ

ಹುಬ್ಬಳ್ಳಿ: ರಾಜ್ಯ ಸರಕಾರದ ಯುವ ನಿಧಿ ಪ್ಲಸ್ ಯೋಜನೆ ಅಡಿಯಲ್ಲಿ ನೂರಾರು ಯುವತಿಯರಿಗೆ ಸ್ವಯಂ ಉದ್ಯೋಗವನ್ನು ಧಾರವಾಡದ ಕೋಮಲ್ ಅಕಾಡೆಮಿ ನೀಡುತ್ತಿದ್ದು, ಇಂದು ಕಚೇರಿಗೆ ಧಾರವಾಡ ಮಹಾನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮಾ ಬಲೋಗಿ ಭೇಟಿ ನೀಡಿದರು.
ಬಳಿಕ ಮಾತಾನಾಡಿದ ಅವರು, ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಜೊತೆಗೆ ಡಿಪ್ಲೊಮಾ, ಬಿಎ ಪದವಿಯನ್ನು ಮುಗಿಸಿದ ಯುವಕ ಯುವತಿಯರ ಅನುಕೂಲಕ್ಕಾಗಿ ಯುವ ನಿಧಿ ಪ್ಲಸ್ ಯೋಜನೆ ಆರಂಭ ಮಾಡಿದ್ದು ಬಹಳ ಹೆಮ್ಮೆಯ ವಿಚಾರ. ಇದರಿಂದ ಸ್ವಯಂ ಉದ್ಯೋಗ ಸೃಷ್ಟಿ ಆಗುತ್ತದೆ. ಇದರ ಸದುಪಯೋಗ ಯುವಕ ಹಾಗೂ ಯುವತಿಯರು ಪಡೆಯಬೇಕು ಎಂದರು
ಈ ಯೋಜನೆಯನ್ನು ವಿಶೇಷವಾಗಿ ಕೋಮಲ ಅಕಾಡೆಮಿ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಮಾದರಿ ಆದ್ದರಿಂದ ಇಂತಹ ಯೋಜನೆಗಳಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಉದ್ಯೋಗ ಸೃಷ್ಟಿ ಆಗಿ ಅದೆಷ್ಟೋ ಕುಟುಂಬ ಉಪ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.
ಇನ್ನೂ ಈ ಯೋಜನೆ ಅಡಿಯಲ್ಲಿ ಯುವಕ ಹಾಗೂ ಯುವತಿಯರಿಗೆ ಬ್ಯೂಟಿಷಿಯನ್, ಫ್ಯಾಷನ್ ಡಿಜೈನಿಂಗ್, ಕಂಪ್ಯೂಟರ್ ಸರ್ವಿಸ್, ಮೊಬೈಲ್ ರಿಪೇರಿ ತರಬೇತಿಯನ್ನು ಒಂದು ತಿಂಗಳ ಕಾಲ ನೀಡಲಾಗುತ್ತದೆ. ಇನ್ನೂ ಇಲ್ಲಿ ತರಬೇತಿ ಪಡೆಯುತ್ತಿರುವ ವಿಧ್ಯಾರ್ಥಿಗಳಿಗೆ ಉಪಹಾರ ಹಾಗೂ ಇತರ ಸೌಲಭ್ಯ ಸಿಗುತ್ತದೆ. ಎಲ್ಲರಲ್ಲೂ ಯುವ ನಿಧಿ ಬರುವುದು ನಿಲ್ಲಬಹುದು ಎಂಬ ಭಾವನೆ ಇದೆ ಆದರೆ ಯಾವುದೇ ಕಾರಣಕ್ಕೂ ಈ ಯೋಜನೆ ನಿಲ್ಲುವುದಿಲ್ಲ, ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೋಮಲ್ ಅಕಾಡೆಮಿ ಡೈರೆಕ್ಟರ್, ರೋಹಿಣಿ ಪ್ರ ಘಂಟಿ ತರಬೇತುದಾರರು ಸಿಡಾಕ್ ಧಾರವಾಡ, ಚಂದ್ರಶೇಖರ ಎಚ್ ಅಂಗಡಿ ಜಂಟಿ ನಿರ್ದೇಶಕರು, ಸಿಡಾಕ,ಧಾರವಾಡ. ರಂಜನಾ ಪೇಟೆ ಸಂಸ್ಥಾಪಕರು ಕೋಮಲ ಬ್ಯೂಟಿ ಅಕಾಡೆಮಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.